January 16, 2026
WhatsApp Image 2025-05-05 at 2.57.43 PM (1)

ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದ ಫೋಟೋ ಇದೀಗ ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಹತ್ಯೆಗೆ ಪ್ಲ್ಯಾನ್ ಮಾಡಲು ಆರೋಪಿಗಳು ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಕ್ಯಾಂಪ್ ಫೈರ್ ಹಾಕಿ ನೈಟ್ ಗ್ರ್ಯಾಂಡ್ ಪಾರ್ಟಿ ಮಾಡಿದ್ದಾರೆ. ಸುಹಾಸ್ ಶೆಟ್ಟಿಯ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್, ರಂಜಿತ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭ ಸುಹಾಸ್ ಹತ್ಯೆಯ ಬಗ್ಗೆ ಮಾತುಕತೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಗೆ ಪಾಝಿಲ್ ಸೋದರ ಆದಿಲ್ ಐದು ಲಕ್ಷ ಸುಪಾರಿ ನೀಡಿದ್ದ. ಅದರಲ್ಲಿ ಮೂರು ಲಕ್ಷ ಹಣವನ್ನೇ ಮುಂಚಿತವಾಗಿ ಪಾವತುಸಲಾಗಿದ್ದು ಅದರಲ್ಲೇ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

About The Author

Leave a Reply