August 30, 2025
WhatsApp Image 2025-05-06 at 6.12.20 PM

ಮೇ 1 ರಂದು ರಾತ್ರಿ ಒಂಭತ್ತು ಗಂಟೆಯ ಸಮಯದಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಜಂಕ್ಷನ್ ಬಳಿ ದುಷ್ಕರ್ಮಿಗಳ ಗುಂಪೊಂದು ಸುಹಾಸ್ ಶೆಟ್ಟಿ ಮೇಲೆ ಅಟ್ಯಾಕ್ ನಡೆಸಿ ಜನನಿಬಿಡ ಪ್ರದೇಶದಲ್ಲಿ ಆತನನ್ನು ಹತ್ಯೆ ಮಾಡಿ ಪರಾರಿಯಾಗುತ್ತದೆ. ಪೊಲೀಸರು ಈ ಹತ್ಯೆಯ ಹಿಂದಿರುವ ಹಂತಕರನ್ನು ಸದೆಬಡಿದು ಬಂಧಿಸುತ್ತಾರೆ .ಈ ಹತ್ಯೆಯಲ್ಲಿ ಚಿಕ್ಕಮಗಳೂರು ಕಳಸ ಭಾಗದ ಇಬ್ಬರು ಹಿಂದೂ ಯುವಕರು ಭಾಗಿಯಾಗುತ್ತಾರೆ. ಗ್ಯಾಂಗ್ ವಾರ್ ಕಾರಣಕ್ಕೆ ನಡೆದ ಈ ಹತ್ಯೆಯನ್ನು ಬಿಜೆಪಿ, ಸಂಘಪರಿವಾರ ಧರ್ಮ ಕಾರಣಕ್ಕೆ ನಡೆದ ಕೊಲೆ ಎಂದು ಬಿಂಬಿಸಿ ಹುಯಿಲೆಬ್ಬಿಸುತ್ತದೆ.

ಪೊಲೀಸ್ ಇಲಾಖೆಯು ಕೂಡಲೇ ಕಾರ್ಯ ಪ್ರವೃತರಾಗಿ ಸುಹಾಸ್ ಶೆಟ್ಟಿ ಹಂತಕರನ್ನು ಪತ್ತೆ ಮಾಡಿ ಬಂದಿಸಿರುತ್ತಾರೆ. ಕೆಲವರಿಗೆ ಈ ವಿಷಯ ಅರಗಿಸಿಕೊಳ್ಳಲು ಆಗದೆ ಯಾವುದರು ಸುದ್ದಿ ಹಬ್ಬಿಸ ಬೇಕು ಅನ್ನುವ ಕಾರಣಕ್ಕೆ ಯಾವುದೇ ಆಧಾರವಿಲ್ಲದೆ
ಈ ಹತ್ಯೆಯಲ್ಲಿ ಬಜಪೆ ಪೋಲಿಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ರಶೀದ್ ರವರು ಸುಹಾಸ್ ಶೆಟ್ಟಿ ಒಂದು ತಿಂಗಳಿಂದ ನಿರಂತರ ವಾಗಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕಟ್ಟುಕತೆ ಕಟ್ಟಿ ಪ್ರಚಾರ ಮಾಡಲಾಗುತ್ತಿದೆ. ಮೂಡಬಿದ್ರೆಯ ಹಿಂದೂ ಕಾರ್ಯಕರ್ತ ಸಮಿತ್ ರಾಜ್ ಧರೆಗುಡ್ಡೆ ಎಂಬಾತ ‘ಸುಹಾಸ್ ಕೊಲೆಯಲ್ಲಿ ಬಜಪೆ ಠಾಣೆಯ ಕಾನ್ಸ್ ಟೇಬಲ್ ರಶೀದ್ ನೇರ ಕೈವಾಡ, ಯಾವಾಗ ಬಂಧನ ಮಾಡುತ್ತೀರಿ?’ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಮುಸ್ಲಿಂ ಪೊಲೀಸ್ ಅಧಿಕಾರಿಗಳನ್ನೇ ಆರೋಪಿಗಳೆಂದು ಚಿತ್ರಿಸಿದ್ದ. ಹಿಂದೂ ಜಾಗರಣ ವೇದಿಕೆ ಮುಖಂಡ ಕೆಟಿ ಉಲ್ಲಾಸ್ ಅನ್ನುವಾತ ‘ಸುಹಾಸ್ ಶೆಟ್ಟಿ ಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಕೊಲೆಯಾಗುವ ಮೂರು ದಿನಗಳ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ‘ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಇವಿಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಹಲವು ರೀತಿಯ ಕಟ್ಟುಕತೆಯನ್ನು ಹರಡಲಾಗಿತ್ತು.

ಈ ರೀತಿ ಸುಳ್ಳು ಆರೋಪ ಮಾಡಿ ಅವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮಾಡುತ್ತಿರುವ ಬಗ್ಗೆ ಸ್ವತಹ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಶೀದ್ ಅವರೇ ಸಮಿತ್ ರಾಜ್ ಧರೆಗುಡ್ಡೆ, ಕೆಟಿ ಉಲ್ಲಾಸ್ ಮೇಲೆ ದೂರು ನೀಡಿದ್ದಾರೆ. ಈ ಬಗ್ಗೆ ಸಮಿತಿರಾಜ್, K T ಉಲ್ಲಾಸ ಮತ್ತು ಇತರರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಕರಾವಳಿ ಭಾಗದ ಹಲವು ಠಾಣೆಗಳಲ್ಲಿ ಮುಸ್ಲಿಂ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದನ್ನು ಸಹಿಸದ ಸಂಘಪರಿವಾರ ಮುಸ್ಲಿಂ ಆಫೀಸರ್ಸ್ ಜಿಹಾದ್ ಅನ್ನುವ ಷಡ್ಯಂತ್ರ ನಡೆಸುತ್ತಿದ್ದಾರೆ. ಹಲಾಲ್, ಲವ್ ಜಿಹಾದ್ ಸೃಷ್ಟಿಸಿದಂತೆ ಮುಸ್ಲಿಂ ಆಫೀಸರ್ಸ್ ಜಿಹಾದ್ ಅನ್ನುವ ನೆರೆಟಿವಿಟಿ ಸೃಷ್ಟಿಸುವ ಹುನ್ನಾರದ ಭಾಗವಷ್ಟೇ.

ಕರಾವಳಿಯಲ್ಲಿ ಸುಹಾಸ್ ಶೆಟ್ಟಿ ಅವರದ್ದೇ ಮೊದಲ ಹತ್ಯೆಯಲ್ಲ. ಕಳೆದ ಒಂದು ದಶಕಗಳಿಂದ ಹಲವಾರು ಸೆನ್ಸೇಷನಲ್ ಹತ್ಯೆಗಳು ಕೂಡ ನಡೆದಿದೆ. ಪೊಳಲಿ ಅನಂತು ವಿನಿಂದ ಹಿಡಿದು ಸುಖಾನಂದ ಶೆಟ್ಟಿಯವರೆಗೆ ಹಲವಾರು ಹತ್ಯೆಗಳು ಜರುಗಿದೆ. ಈ ಕೇಸಿನಲ್ಲಿದ್ದ ಮುಸ್ಲಿಂ ಹಂತಕರನ್ನು ಮುಸ್ಲಿಂ ಅಧಿಕಾರಿಗಳೇ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕಾನೂನಿನ ಅಡಿಗೆ ತಂದಿದ್ದಾರೆ. ಇದೀಗ ಸಂಘಪರಿವಾರ ಪೊಲೀಸ್ ಇಲಾಖೆಯಲ್ಲಿ ಹಿಂದೂ -ಮುಸ್ಲಿಂ ಅನ್ನುವ ತನ್ನ ಅಜೆಂಡಾವನ್ನು ಸಕ್ರೀಯಗೊಳಿಸಲು ಯತ್ನಿಸುತ್ತಿದ್ದು ನಾಡಿನ ಪ್ರಜ್ಞಾವಂತರು ಸಂಘಪರಿವಾರದ ಕಪಟತೆಯನ್ನು ಬಯಲಿಗೊಳಿಸಬೇಕಿದೆ. ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಿಸಬೇಕಿದೆ.

About The Author

Leave a Reply