January 17, 2026
WhatsApp Image 2025-05-13 at 2.02.30 PM

ವಿಟ್ಲ:  ಜನಸಾಮಾನ್ಯರು,ಮಹಿಳೆಯರು ಮಕ್ಕಳು ಸೇರಿದಂತೆ ಆದಾರ್ ತಿದ್ದುಪಡಿ,ಜಾತಿ‌ ಮತ್ತುಆದಾಯ,ಇನ್ನಿತರ ಅರ್ಜಿಗಳನ್ನು ಹಾಗೂ ಇತರ ದಿನನಿತ್ಯ ತಮ್ಮ ಕೆಲಸಕಾರ್ಯಗಳಿಗೆ ಆಗಮಿಸುವ 23 ಗ್ರಾಮಗಳನ್ನೊಳಗೊಂಡ ನಾಡ ಕಛೇರಿಗೆ ಬೇಟಿ ಹಾಗೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಸಂಧರ್ಭದಲ್ಲಿ ಕುಡಿಯುವ ನೀರಿನ ಅಗತ್ಯತೆಯನ್ನು ಮನಗಂಡು ಸಾಮಾಜಿಕ ಕಾರ್ಯಕರ್ತ ಹಸೈನಾರ್ ತಾಳಿತ್ತನೂಜಿ ಮುಖಾಂತರ ಉತ್ತಮ ಗುಣಮಟ್ಟದ ಅತ್ಯದುನಿಕ ಶುದ್ದ ಕುಡಿಯುವ ನೀರಿನ ಘಟಕವನ್ನು ಅಸ್ಸ್- ಸದಖ ಟ್ರಸ್ಟ್ ಮಂಗಳೂರು ವತಿಯಿಂದ ನೀಡಲಾಗಿದ್ದು ಇದನ್ನು ಇಂದು ವಿಟ್ಲ ಪಟ್ಟಣ ಪಂಚಾಯತ್ ಪ್ರಥಮ ಪ್ರಜೆ ಕರುನಾಕರ ನಾಯ್ತೊಟ್ಟು ಉದ್ಗಾಟಿಸಿದರು.ಉದ್ಘಾಟಿಸಿ ಮಾತಾಡಿದ ಅವರು ಇಂತಹ ಸಾರ್ವಜನಿಕ ಸ್ಥಳಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಪುಣ್ಯದಾಯಕ ಕೆಲಸವೆಂದು ತಿಳಿಸಿದರು ಅಲ್ಲದೆ ಟ್ರಸ್ಟ್ ಬಗ್ಗೆ ಈ ಹಿಂದೆ ನಾನು ಕೇಳಿ ತಿಳಿದುಕೊಂಡಿದ್ದು,ಅವರ ಸಾರ್ವಜನಿಕ ಕೆಲಸ ಭಗವಂತ ಮೆಚ್ಚುವಂತ್ತದ್ದು ಎಂದು ತಿಳಿಸಿದರು.ನಂತರ ಅನುಗ್ರಹ ಕಾಲೇಜು ಆಡಳಿತ ಮಂಡಳಿಯ ಹೈದರ್ ನಿರ್ಕಜೆ ಕೇಪು,ಲಯನ್ಸ್ ವಿಟ್ಲ ವಲಯಾದ್ಯಕ್ಷ ಸಂದೇಶ್ ಶೆ್ಟ್ಟಿ ಬಿಕ್ನಾಜೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಕಂದಾಯ ನೀರಿಕ್ಷಕ M.N ರವಿ,ಕೊಳ್ನಾಡು ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಕೆ.ಎ‌.ಅಸ್ಮ ಹಸೈನಾರ್,ಸಾಮಾಜಿಕ ಮುಖಂಡ ಸೋಮಶೇಖರ ಗೌಡ ತಾಳಿತ್ತನೂಜಿ ಉಪಸ್ಥಿತರಿದ್ದರು.ಅಸ್ಸ ಸದಖ ಟ್ರಸ್ಟ್ ಹಾಗೂ ಕಂದಾಯ ಇಲಾಖೆ ವತಿಯಿಂದ ನಡೆದ ಚಿಕ್ಕದಾಗಿ ಚೊಕ್ಕದಾದ ಸರಳ ಕಾರ್ಯಕ್ರಮವನ್ನು ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿ ಧನ್ಯವಾದ ತಿಳಿಸಿದರು.

About The Author

Leave a Reply