October 13, 2025
WhatsApp Image 2025-05-17 at 10.54.37 AM

 ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ಆಗಿದ್ದು, ಕ್ಷುಲ್ಲಕ ಕಾರಣಕ್ಕೆ ಕಾರು ಗುದ್ದಿ ಟೆಕ್ಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕನಕಪುರ ರಸ್ತೆಯ ವಸಂತಪುರ ಕ್ರಾಸ್ ನಲ್ಲಿ ಸಿಗರೇಟ್ ವಿಚಾರವಾಗಿ ಇಬ್ಬರ ನಡುವೆ ಕಿರಿಕ್ ಆರಂಭವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಸಂಜಯ್ ಕೊಲೆಯಾಗಿರುವ ಟೆಕ್ಕಿ. ಪ್ರತೀಕ್ ಎಂಬಾತ ಕೊಲೆ ಮಾಡಿದ್ದಾನೆ. ಅಪಘಾತದಿಂದ ಸಾವು ಎಂದು ತಿಳಿದಿದ್ದ ಪೊಲೀಸರಿಗೆ ತನಿಖೆ ಬಳಿಕ ಕೊಲೆ ಎಂಬುದು ಗೊತ್ತಾಗಿದೆ.

ಸಿಗರೇಟ್ ಸೇದಲು ಸಂಜಯ್ ಹಾಗೂ ಕಾರ್ತಿಕ್ ಕಚೇರಿಯಿಂದ ಹೊರ ಬಂದಿದ್ದರು. ರಸ್ತೆ ಬದಿ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ಅಲ್ಲಿಯೇ ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಎಂಬಾತ ಕಾರಿನಿಂದ ಇಳಿಯದೇ ಸಿಗರೇಟ್ ತಂದು ಕೊಡುವಂತೆ ಸಂಜಯ್ ಗೆ ಹೇಳಿದ್ದ ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಸಂಜಯ್ ಹಾಗೂ ಕಾರ್ತಿಕ್ ಪ್ರತಿಕ್ ಜೊತೆ ಜಗಳವಾಡಿದ್ದಾರೆ. ಗಲಾಟೆ ತಾರಕ್ಕೇರಿದೆ. ಬಳಿಕ ಬಳಿಕ ಸಂಜಯ್ ಹಾಗೂ ಕಾರ್ತಿಕ್ ಬೈಕ್ ನಲ್ಲಿ ತೆರಳುತ್ತಿದ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಕೆಳಗೆ ಬಿದ್ದ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

About The Author

Leave a Reply