October 13, 2025
WhatsApp Image 2025-05-17 at 5.50.04 PM

ನವದೆಹಲಿ : ಇತ್ತೀಚಿಗೆ ಪಹಲ್ಗಾಂ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಮೂಲಕ ದಾಳಿ ಮಾಡಿ ಉಗ್ರರ ನೆಲೆಗಳನ್ನು ದ್ವಂಸಗೊಳಿಸಿ ಸುಮಾರು ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ಪರವಾಗಿ ವಿಡಿಯೋ ಮಾಡಿ ಭಾರತದ ಗೌಪ್ಯತೆ ಕುರಿತು ಯೂಟ್ಯೂಬ್ ನಲ್ಲಿ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಪಂಜಾಬ್ ನಲ್ಲಿ ಇಬ್ಬರು ಮಹಿಳಾ  ಯೂಟ್ಯೂಬ್ ಗಳನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು ಹರಿಯಾಣದ ಮಹಿಳಾ ಯೂಟ್ಯೂಬರ್ ಗಳನ್ನು ಇದೀಗ ಅರೆಸ್ಟ್ ಮಾಡಲಾಗಿದೆ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಪರವಾಗಿ ವಿಡಿಯೋ ಮಾಡುತ್ತಿದ್ದ ಇಬ್ಬರು ಯೂಟ್ಯೂಬರ್ಗಳು ಇದೀಗ ಲಾಕ್ ಆಗಿದ್ದಾರೆ. ಯೂಟ್ಯೂಬ್ ನಲ್ಲಿ ಪಾಕಿಸ್ತಾನ ಪರವಾಗಿ ವಿಡಿಯೋ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗುಝಾಲ ಮತ್ತು ಜ್ಯೋತಿರಾಣಿ ಎಂಬ ಇಬ್ಬರು ಮಹಿಳಾ ಯೂಟ್ಯೂಬರ್ ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಭಾರತೀಯ ಸೇನೆಯ ಮಾಹಿತಿ ಮತ್ತು ಹರಿಯಾಣ ಸೇರಿದಂತೆ ಸುತ್ತಮುತ್ತಲು ಇರುವ ಸೇನಾ ನೆಲೆಗಳ ಮಾಹಿತಿ ಚಲನ ವಲನಗಳ ಕುರಿತು ಜ್ಯೋತಿರಾಣಿ ಮಾಹಿತಿಯನ್ನು ಕೊಡುತ್ತಿದ್ದಳು. ಟ್ರಾವೆಲ್ ವಿತ್ ಜ್ಯೋ ಎನ್ನುವ ಚಾನೆಲ್ ಮೂಲಕ ಯೂಟ್ಯೂಬ್ ಚಾನೆಲ್ ಹೊಂದಿರುವ ಈಕೆ 2023 ರಲ್ಲಿ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ವಿಡಿಯೋ ಮಾಡಿದ್ದಳು. ಜ್ಯೋತಿರಾಣಿ ಪಾಕಿಸ್ತಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ವಿಡಿಯೋ ಮಾಡಿದ್ದಳು. ಅಲ್ಲದೆ ಪಾಕಿಸ್ತಾನದ ಪರವಾಗಿ ಒಳ್ಳೆಯ ಅಭಿಪ್ರಾಯ ಬರುವಂತಹ ವಿಡಿಯೋಗಳನ್ನು ಹಾಕಿ ಅಪ್ಲೋಡ್ ಮಾಡಿದ್ದಾಳೆ. ಹಾಗಾಗಿ ಆಕೆಯನ್ನು ಮತ್ತು ಆಕೆ ಸ್ನೇಹಿತೆಯನ್ನು ಈಗ ಅರೆಸ್ಟ್ ಮಾಡಲಾಗಿದೆ.

About The Author

Leave a Reply