August 30, 2025
WhatsApp Image 2025-05-20 at 6.12.08 PM

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ನಡುವೆ ಗಲಾಟೆ ನಡೆದಿದೆ. ನಿನ್ನೆಯಷ್ಟೇ ಸ ಕೈದಿಗಳ ಗ್ಯಾಂಗ್‌ ವಾರ್ ನಡೆದಿತ್ತು. ಇಂದು ಮತ್ತೆ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.

ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದ ಅಡುಗೆ ಕೋಣೆಯಲ್ಲಿ ಹಿಂದೂ ಕೈದಿಯ ಮೇಲೆ ಮುನೀರ್ ಎಂಬ ಕೈದಿ ಹಲ್ಲೆ ನಡೆಸಿದ್ದು, ಪರಿಣಾಮ ಇಡೀ ಕರಾಗೃಹ ರಣಾಂಗಣವಾಗಿ ಮಾರ್ಪಾಡಾಗಿದೆ. ಕ್ಷಣಮಾತ್ರದಲ್ಲೇ ಈ ಉಳಿದ ಕೈದಿಗಳ ಗುಂಪು ಕೂಡ ಹಲ್ಲೆಗೆ ಮುಂದಾಗಿದೆ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಜೈಲಧಿಕಾರಿಗಳು ಬಡಿದಾಟದಲ್ಲಿ ತೊಡಗಿದ್ದ ಎರಡೂ ಕೈದಿಗಳ ಗುಂಪನ್ನು ಬೇರ್ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಬರ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀತಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

About The Author

Leave a Reply