October 13, 2025
WhatsApp Image 2025-05-21 at 12.00.03 PM

ಸಕಲೇಶಪುರ: ಎಸ್ ಕೆ ಐ ಎಮ್ ಬೋರ್ಡ್ ನಿರ್ದೇಶನ ಅನುಸಾರ ಕರ್ನಾಟಕದಲ್ಲಿ ತಾ 18/5/25 ರಂದು ಬೆಳಗ್ಗೆ 7.30ಕ್ಕೆ ಏಕಕಾಲದಲ್ಲಿ 11 ಸಾವಿರ ಮದರಸಗಳ 12 ಲಕ್ಷ ವಿದ್ಯಾರ್ಥಿ ಗಳು ನಡೆಸಿದ ಮಾದಕದ್ರವ್ಯ ವ್ಯಸನದ ಅಭಿಯಾನದ ಪ್ರಯುಕ್ತ ಸಕಲೇಶಪುರದ ಕೊಲ್ಲಹಳ್ಳಿ ಅನ್ವರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳು ತಮ್ಮ ಮದರಸದಲ್ಲಿ ಯಶಸ್ವಿ ಅಭಿಯಾನವನ್ನು ನಡೆಸಿದರು
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಮಸೀದಿ ಖತೀಬರಾದ ಬದ್ರುದ್ದಿನ್ ದಾರಿಮಿ, ಮದರಸ ಉಸ್ತಾದ್ ಸ್ವಾದೀಕ್ ಹನೀಫಿ, ಅಬ್ಬಾಸ್, ಶರೀಫ್, ಹಾಗು ‌ಅಬುಬ್ಬಕರ್,ಅಶೀಕ್ ರವರು ಭಾಗವಹಿಸಿ ಮಾದಕದ್ರವ್ಯವನ್ನು ವಿರೋದಿಸುದಾಗಿ ಪ್ರಮಾಣವಚನ ಸ್ವೀಕರಿಸಿದರು,
ಮಾದಕದ್ರವ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮದರಸದ ಮುಖ್ಯ ಗುರುಗಳಾದ ಬದ್ರುದ್ದಿನ್ ದಾರಿಮಿರವರು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನದಾಟ್ಟಾಗುವಂತೆ ವಿವರಿಸಿ,
ಮಾದಕದ್ರವ್ಯದಿಂದ ದೂರವಿರುವಂತೆ ಸಲಹೆ ನೀಡಿದರು
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ

About The Author

Leave a Reply