ಸಿದ್ದರಾಮಯ್ಯ ಸರಕಾರಕ್ಕೆ 2 ವರ್ಷ: ದ.ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಅಭಿನಂದನೆ

ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಗ್ರಾ.ಪಂಚಾಯತಿಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಬಾಕಿ ಉಳಿಸಿಕೊಂಡಿರುವ ವಿದ್ಯುತ್ತ್ ಬಿಲ್ಲಿನ ಬಡ್ಡಿಮನ್ನಾ ಸೇರಿದಂತೆ ಜನಪರ ಕಾರ್ಯಕ್ರಮ ಘೋಷಣೆಗೆ ದ.ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಅಭಿನಂದನೆ: ದ.ಕ.ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾದ್ಯಕ್ಷ ಶ್ರೀ.ಕುಳಾಲು ಸುಭಾಶ್ಚಂದ್ರ ಶೆಟ್ಟಿ

ಸರಕಾರಕ್ಕೆ 2 ವರ್ಷ ತುಂಬಿದ ಹಿನ್ನಲೆ ಮಾನ್ಯ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು,ಗ್ರಾ.ಪಂಚಾಯತಿಗಳ ಮೂಲಕ ಅಧಿಕಾರ ವಿಕೇಂದ್ರಿಕರಣ ತತ್ವದಲ್ಲಿ ವಿಶ್ವಾಸವಿಟ್ಟು ಅನೇಕ ಜನಪರ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಅನುಷ್ಠಾನ ಮಾಡಲಾಗಿದೆ.ಅದರಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆಯ ಮೂಲಕ ನಿವೇಶನ ಹಕ್ಕುಪತ್ರ ನೀಡುವ ದಿಟ್ಟ ನಿರ್ದಾರ,ಗ್ರಾ.ಪಂಚಾಯತಿಗಳ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ಗ್ರಾ.ಪಂಚಾಯತಿಗೆ ಸಹಕಾರಿಯಾಗುವಂತೆ ಬಾಕಿ ಉಳಿಸಿರುವ ವಿದ್ಯುತ್ತ್ ಬಿಲ್ಲಿನ ಬಡ್ಡಿಮನ್ನಾ,ದ.ಕನ್ನಡ ಮಂಗಳೂರು ಕೇಂದ್ರವಾಗಿರುವ ಜಿಲ್ಲಾಡಳಿತ ಕಛೇರಿಯಾದ ಪ್ರಜಾಸೌಧ ನೂತನ ಕಟ್ಟಡ,ಹಲವಾರು ವರ್ಷಗಳಿಂದ ಪಟ್ಟೆದಾರರು,ಸಾರ್ವಜನಿಕರ ಅಲೆದಾಟ,ಸಮಯ,ಆರ್ಥಿಕ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ 11 ಇ, ಮತ್ತು ಅತೀ ಮಹತ್ತರವಾದ ಪೋಡಿಮುಕ್ತ ಗ್ರಾಮ ಘೋಷಣೆ ಇವೆಲ್ಲವೂ ಸರಕಾರದ ದಿಟ್ಟ ಕ್ರಮಗಳು ಎಂದು ಕುಳಾಲು ಸುಭಾಶ್ಚಂದ್ರ ಶೆಟ್ಟಿ ತಿಳಿಸಿ ಅಭಿನಂದನೆ ಸಲ್ಲಿಸಿದರು.

ಇವೆಲ್ಲ ಅನುಷ್ಠಾನವಾಗುವಂತೆ ಶ್ರಮಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ,ಸಿದ್ದರಾಮಯ್ಯ,ಕೆ.ಪಿ.ಸಿ.ಸಿ ಅಧ್ಯಕ್ಷರೂ,ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್,ಪಂಚಾಯತ್ ರಾಜ್ ಸಚಿವಾರದ ಪ್ರಿಯಾಂಕ ಖರ್ಗೆ,ಕಂದಾಯ ಸಚಿವರಾದ ಕೃಷ್ಣಬೈರೇ ಗೌಡ ಸೇರಿದಂತೆ ಸಚಿವ ಸಂಪುಟಕ್ಕೆ ಧನ್ಯವಾದ ತಿಳಿಸಿದರು..

Leave a Reply