ಹುಕ್ಕಾ ಬಾರ್ ಗೆ ಸಿಸಿಬಿ ಪೊಲೀಸರ ದಾಳಿ: ಬಂಧನದ ಬಗ್ಗೆ MFC ಸಿದ್ದಿಕ್ ಸ್ಪಷ್ಟನೆ

ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿರುವ ಮಾಲ್ ವೊಂದರ ಪಾರ್ಕಿಂಗ್ ನಲ್ಲಿರುವ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತೆನ್ನಲಾದ ಹುಕ್ಕಾ ಬಾರ್ ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಕಂಕನಾಡಿಯ ಮ್ಯಾಕ್ ಮಾಲ್ ನ ಪಾರ್ಕಿಂಗ್ ನಲ್ಲಿರುವ BLACK MOON RESTO CAFÉ ಎಂಬ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಗೆ ದಾಳಿ ನಡೆಸಲಾಗಿತ್ತು. ಅದರಲ್ಲಿ MFC‌ ಸಿದ್ದಿಕ್ ಬಂಧನವಾಗಿದೆ ಎಂದು ಹಲವಾರು ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು,
ಈ ಬಗ್ಗೆ MFC ಸಿದ್ದಿಕ್ ಸ್ವತಃ ಸ್ಪಷ್ಟನೆ ನೀಡಿದ್ದು ತಾನು ಬಂಧನವಾಗಿಲ್ಲ ಮತ್ತು ನಾನು ಮಂಜೇಶ್ವರ ವರ್ಕಾಡಿಯ ತಾಯಿ ಮನೆಯಲ್ಲಿ ಇದ್ದೆನೆ, ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೆನೆ, Black Moon Resto Cafe ಗೆ ಮತ್ತು ನನಗೆ ಸಂಬಂಧ ಇಲ್ಲ ಅದರ ಪಾಲುದಾರನೂ ಅಲ್ಲ ಮತ್ತು ಅದರ ಗ್ರಾಹಕನ್ನು ಅಲ್ಲ ಎಂದು ಸ್ಪಷ್ಟನೆ ನೀಡಿದರು.

Leave a Reply