August 30, 2025
WhatsApp Image 2025-05-28 at 12.05.08 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸರ್ಕಾರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮೂಹಿಕ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಜಿಲ್ಲೆಗೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಪ್ರಕರಣ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ನಿಸಾ‌ರ್ ಎಂಬುವರು ನೀಡಿದ ದೂರು ಆಧರಿಸಿ, ಅಬ್ದುಲ್ ರಹಿಮಾನ್​ಗೆ ಪರಿಚಯಸ್ಥರೇ ಆಗಿರುವ ದೀಪಕ್ ಮತ್ತು ಸುಮಿತ್ ಸೇರಿದಂತೆ 15 ಜನರ ವಿರುದ್ಧ ಬಿಎನ್​ಎಸ್​ ಕಾಯ್ದೆ 103, 109, 118(1), 118(2), 190, 191(1), 191(2), 191(3)ರ ಅಡಿ ಎಫ್​ಐಆರ್​ ದಾಖಲಾಗಿದೆ.

“ಅಬ್ದುಲ್ ರಹಿಮಾನ್ ಮತ್ತು ನಾನು (ಕಲಂದರ್ ಶಾಫಿ) ಪಿಕ್ ಅಪ್ ವಾಹನದಲ್ಲಿನ ಮರಳನ್ನು ಅನ್​ ಲೋಡ್ ಮಾಡಲು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆಗೆ ಹೋಗಿದ್ದೇವು. ಈ ವೇಳೆ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ದಾಳಿ ಮಾಡಿದ್ದಾರೆ. ಚಾಲಕನ ಸೀಟಿನಲ್ಲಿ ಕುಳಿತಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು, ಅವರ ಮೇಲೆ ತಲವಾರು, ಚೂರಿ, ರಾಡ್​ಗಳಿಂದ ಹಲ್ಲೆ ಮಾಡಿದರು. ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾದರು” ಎಂದು ಹಲ್ಲೆಗೊಳಗಾದ ಕಲಂದ‌ರ್ ಶಾಫಿ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಮೊಹಮ್ಮದ್ ನಿಸಾ‌ರ್ ಎಂಬವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.

About The Author

Leave a Reply