ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ: ಸುರತ್ಕಲ್ ನಲ್ಲಿ ಖಾಸಗಿ ಬಸ್ ಮೇಲೆ ಕಲ್ಲುತೂರಾಟ

ಮಂಗಳೂರು : ನಿನ್ನೆ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಭೀಕರ ಕೊಲೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಸುರತ್ಕಲ್ ನಲ್ಲಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ.

ಸುರತ್ಕಲ್ ನಲ್ಲಿ ಖಾಸಗಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಫರಂಗಿಪೇಟೆ ಹಾಗೂ ಬಿ.ಸಿ ರೋಡಿನಲ್ಲಿ ಅಘೋಷಿತ ಬಂದ್ ಮಾಡಲಾಗಿದ್ದು, ಫರಂಗಿಪೇಟೆಯಿಂದ ತುಂಬೇಯ ತನಕ ಎಲ್ಲಾ ಅಂಗಡಿಗಳನ್ನು ಇದೀಗ ಬಂದ್ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಕೊಲೆ ನಡೆದಿದೆ, ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ 15 ಜನರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ತಂದಿದ್ದರು.

ಈ ವೇಳೆ ದೀಪಕ್, ಸುನೀಲ್ ಸೇರಿ ಹದಿನೈದು ಮಂದಿ ಏಕಾಏಕಿ ದಾಳಿ ಮಾಡಿದ್ದಾರೆ ಚಾಲಕನ ಸೀಟ್ನಲ್ಲಿ ರಹಿಮಾನ್ ಅನ್ನು ಹೊರಗಡೆ ಎಳೆದು ತಲ್ವಾರ್, ಚೂರಿ ಹಾಗು ರಾಡ್ ಗಳಿಂದ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಕಿರುಚಾಡಿದ್ದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಅಂತ ಘಟನೆಯ ಬಗ್ಗೆ ರೆಹಮಾನ್ ಜೊತೆ ಇದ್ದ ಮತ್ತೋರ್ವ ಗಾಯಾಳು ಕಲಂದರ್ ಶಫಿ ಕೊಟ್ಟಂತಹ ಮಾಹಿತಿಯಾಗಿದೆ.

Leave a Reply