August 30, 2025
WhatsApp Image 2025-05-29 at 6.52.30 PM

ಉಡುಪಿ : ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ದ್ವೇಷ ಸಂಘರ್ಷವನ್ನು ಹತೋಟಿಗೆ ತರಲು ಆ್ಯಂಟಿ ಕಮ್ಯುನಲ್ ಫೋರ್ಸ್ ಅನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಭರವಸೆಯನ್ನು ನೀಡಿರುತ್ತಾರೆ.

ಅದರಂತೆ ಆ್ಯಂಟಿ ಕಮ್ಯುನಲ್ ಫೋರ್ಸನ್ನು ಈ ಕೂಡಲೇ ಕಾರ್ಯ ಪ್ರವೃತ್ತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಂ. ಎಸ್. ಸಯ್ಯದ್ ನಿಜಾಮುದ್ದೀನ್ ಪಡುಬಿದ್ರಿ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಿಷ್ಠಾವಂತ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ. ಕೆ. ಅರುಣ್ ಕುಮಾರ್ ರವರನ್ನು ಆ್ಯಂಟಿ ಕಮ್ಯುನಲ್ ಫೋರ್ಸ್ ನ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆ ಶಾಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಜೀವಂತ ಸಾಕ್ಷಿ ಶಾಂತವಾಗಿರುವ ಉಡುಪಿ ಜಿಲ್ಲೆ.

ಡಾ. ಕೆ. ಅರುಣ್ ಕುಮಾರ್ ರವರು ಅಧಿಕಾರ ವಹಿಸಿಕೊಂಡ ನಂತರ ಉಡುಪಿ ಜಿಲ್ಲೆ ಯಾವ ರೀತಿಯಲ್ಲಿ ಶಾಂತವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವoತಃ ವಿಚಾರ. ಇಡೀ ಕರ್ನಾಟಕವೇ ಉಡುಪಿಯತ್ತ ತಿರುಗಿ ನೋಡುವಂತೆ ಉಡುಪಿ ಜಿಲ್ಲೆಯನ್ನು ಶಾಂತವಾಗಿಸಿರುವ ಕೀರ್ತಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್ ಕುಮಾರ್ ರವರಿಗೆ ಸಲ್ಲುತ್ತದೆ.

ಆದುದರಿಂದ ಕೂಡಲೇ ಆ್ಯಂಟಿ ಕಮ್ಯುನಲ್ ಫೋರ್ಸ್ ಅನ್ನು ಆರಂಭಿಸಿ ಅದಕ್ಕೆ ಈಗ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಡಾ. ಕೆ. ಅರುಣ್ ಕುಮಾರ್ ರವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಿ ಎಂದು ಎಂ ಎಸ್ ಸಯ್ಯದ್ ನಿಜಾಮುದ್ದೀನ್ ರವರು ಆಗ್ರಹಿಸಿರುತ್ತಾರೆ.

About The Author

Leave a Reply