October 13, 2025
WhatsApp Image 2025-05-31 at 10.56.39 AM

ಮಂಗಳೂರು : ದಾಳಿ ಮಾಡದಂತೆ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ಲಂಚ ನೀಡಲು ಬಂದ ಆರೋಪದ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಕೋಟೆಕಣಿ ಪ್ರಶಾಂತ್ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಪ್ರವೀಣ್ ನಾಯ್ಕ್ ಮತ್ತು ಗಜೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದಿದ್ದರು.

ಬಂದವರು ಇನ್‌ಸ್ಪೆಕ್ಟರ್‌ ಅವರಲ್ಲಿ ಮಾತನಾಡುತ್ತಾ ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂಬುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ತಾನು 3 ತಿಂಗಳಿಗೊಮ್ಮೆ 25,000 ರೂ ಹಣವನ್ನು ಲಂಚವಾಗಿ ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ಲಂಚದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಗಜೇಂದ್ರ ಅವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.

About The Author

Leave a Reply