February 12, 2026
WhatsApp Image 2025-06-03 at 10.10.33 PM

ಶಿವಮೊಗ್ಗ: ಐಪಿಎಸ್ ಆರ್ ಸಿಬಿ ತಂಡ ಗೆಲವು ಸಾಧಿಸಿದ ಹಿನ್ನಲೆ ನಡೆದ ಸಂಭ್ರಮಾಚರಣೆ ವೇಳೆ ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವನಪ್ಪಿದ ಘಟನೆ ಉಷಾ ನರ್ಸಿಂಗ್‌ ಹೋಂ ಸರ್ಕಲ್ ಬಳಿಯ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಅಪಘಾತ ಸಂಭವಿಸಿದೆ.

ಮೃತರನ್ನು ವೆಂಕಟೇಶ ನಗರದ ನಿವಾಸಿ ಅಭಿನಂದನ್ (21) ಎಂದು ಗುರುತಿಸಲಾಗಿದೆ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗೆ ಯುವಕರು ಬೈಕ್ ಗಳಲ್ಲಿ ಹೊರಟಿದ್ದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿವೆ. ತೀವ್ರ ಗಾಯಗೊಂಡಿದ್ದ ಅಭಿನಂದನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

About The Author

Leave a Reply