August 30, 2025
WhatsApp Image 2025-06-04 at 10.26.22 PM

ಪುತ್ತೂರು : ಇದೇ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆದ ಕಾಲ್ತುಳಿತಕ್ಕೆ ಪುತ್ತೂರು ಮೂಲದ ವಿಧ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಬಲಿಯಾಗಿದ್ದಾರೆ.

ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆದ ಕಾಲ್ತುಳಿತಕ್ಕೆ 11 ಜನ ಸಾವನಪ್ಪಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಚಿನ್ಮಯಿ ಶೆಟ್ಟಿ (20) ಸಾವನಪ್ಪಿದ್ದಾರೆ.

ಚಿನ್ಮಯಿ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುತಾಲೂಕಿನ ಉಪ್ಪಿನಂಗಡಿ ಯವರು. ಈಕೆ ತಂದೆ  ಕರುಣಾಕರ ಶೆಟ್ಟಿ, ತಾಯಿ ಪೂಜಾ. ಓರ್ವ ಸಹೋದರ ಬ್ಯಾಂಕ್ ಉದ್ಯೋಗಿ. ತಂದೆ ಕರುಣಾಕರ ಬೆಂಗಳೂರಿನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಪ್ರಸ್ತುತ ಈ ಕುಟುಂಬ ಬೆಂಗಳೂರಿನ ನಾರಾಯಣ ನಗರದಲ್ಲಿ ನೆಲೆಸಿದ್ದಾರೆ. ಓದಿನಲ್ಲೂ ಮುಂದೆ ಇದ್ದ ಈಕೆ ಬೆಂಗಳೂರಿನ ಕನಕಪುರ ರಸ್ತೆಯ ಯಲಚನಹಳ್ಳಿ ಜ್ಯೋತಿ ಇಂಜಿನಿಯಂಗ್ ವ್ಯಾಸಂಗ ಮಾಡುತ್ತಿದ್ದರು., ಕ್ರೀಡೆಯಲ್ಲೂ ಸಾಧಕಿ. ಯಕ್ಷ ತರಂಗ ಯಕ್ಷಗಾನ ತರಬೇತಿ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು.

ಮೃತ ಚಿನ್ಮಯಿ ಶೆಟ್ಟಿ ಅಜ್ಜಿ ಮನೆ ಇರೋದು ಉಪ್ಪಿನಂಗಡಿಯ ಇಳಂತಿಲ ಎಂಬಲ್ಲಿ, ಆದರೆ ಚಿನ್ಮಯಿ ಕುಟುಂಬ ಮೂಲತ ಕುಶಾಲನಗರದವರು. ಇಳಂತಿಲದಲ್ಲಿ ಜಾಗ ಖರೀದಿ ಮಾಡಿದ್ದ ಚಿನ್ಮಯಿ ಕುಟುಂಬ. ಸದ್ಯ ಮನೆಯಲ್ಲಿ ಇರೋದು ಚಿನ್ಮಯಿ ಅಜ್ಜಿ ಮತ್ತು ಚಿಕ್ಕಪ್ಪ ಮಾತ್ರ. ಚಿನ್ಮಯಿ ಕುಟುಂಬ ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದು, ಉಪ್ಪಿನಂಗಡಿಯ ಮನೆಗೆ ಕೆಲವೊಮ್ಮೆ ಮಾತ್ರ ಭೇಟಿ ನೀಡುತ್ತಿದ್ದರು.

ಆದ್ರೆ ಗೆಳೆಯರ ಜೊತೆಗೆ ಚಿನ್ನಸ್ವಾಮಿ ಮೈದಾನಕ್ಕೆ ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಮೃತ ಮಗಳ ಶವದ ಮುಂದೆ ಅವರ ತಾಯಿ ಎದ್ದೇಳಮ್ಮ ಚಿನ್ಮಯಿ ಅಂತ ಎದೆ ಬಡಿದುಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿರುವ ದೃಶ್ಯ ಮಾತ್ರ ಕಣ್ಣೀರು ತರಿಸುವಂತಿತ್ತು.

About The Author

Leave a Reply