January 16, 2026
road-accident-stock_1650985041

ಮಂಗಳೂರು: ನಗರದ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಪ್ಲಾಟ್‌ ಫಾರಂ ಸಂಖ್ಯೆ 6 ಮತ್ತು 7ರ ನಡುವೆ ಚಾಲಕನೊಬ್ಬ ಕಾರು ಚಲಾಯಿಸಿ ಮುಖ್ಯದ್ವಾರದ ಮೂಲಕ ಹೊರಗೆ ಬಂದಿದ್ದಾನೆ!

ಕೇರಳ ನೋಂದಣಿಯ ಕಾರು ಆಗಿದ್ದು, ಶಿಮಿಲ್‌ ಎಂಬಾತನೇ ಆರೋಪಿ ಚಾಲಕ. ಆತ ಬಸ್‌ ತಂಗುದಾಣದ ಒಳಗೆ ಕಾರು ಚಲಾಯಿಸಿಕೊಂಡು ಬಂದು, ಸಾರ್ವಜನಿಕರು ಕುಳಿತುಕೊಳ್ಳುವ ಮತ್ತು ಬಸ್ಸಿನಿಂದ ಇಳಿದು ಹೋಗುವ ಪ್ಲಾಟ್‌ಫಾರಂ ಮೇಲೆಯೇ ಹಾರು ಹತ್ತಿಸಿ ಹೊರಗೆ ಹೋಗಿದ್ದಾನೆ.

ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ನಿಯಂತ್ರಣ ತಪ್ಪಿದ ಕಾರು
ಪ್ರಯಾಣಿಕರೊಬ್ಬರನ್ನು ಬಿಡಲು ಬಂದಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಏಕಾಏಕಿ ಮುಖ್ಯದ್ವಾರದ ಒಳಗೆ ನುಗ್ಗಿದೆ. ಅನ್ಯ ದಾರಿ ಕಾಣದೆ ಚಾಲಕ ಪ್ರಯಾಣಿಕರು ಸಾಗುವ ದಾರಿಯ ಮೂಲಕವೇ ಕಾರನ್ನು ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ. ಮಂಗಳೂರು ನಗರ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply