August 30, 2025
WhatsApp Image 2025-06-11 at 9.37.22 PM

ಬಂಟ್ವಾಳ: ಪಾಣೆಮಂಗಳೂರು ಸೇತುವೆ ಮೇಲೆ ಸಂಚಾರ ನಿಷೇಧ ಹೇರಿ ಹಾಕಲಾದ ಕಬ್ಬಿಣದ ತಡೆಯನ್ನು ಮುರಿದು ಸರಕಾರಕ್ಕೆ ಸಾವಿರಾರು ರೂ ನಷ್ಟ ಉಂಟು ಮಾಡಿದ ವಾಹನ ಚಾಲಕನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ನಝೀರ್ ಅಹಮದ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಹಳೇ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್. 48 ರ ಸೇತುವೆಯನ್ನು 2004-05 ರಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ವಹಣೆ ಮತ್ತು ದುರಸ್ಥಿ ಬಗ್ಗೆ ಪುರಸಭೆಗೆ ಹಸ್ತಾಂತರಿಸಿರುತ್ತಾರೆ. ಇದು ಸ್ವಾತಂತ್ರ್ಯ ಪೂರ್ವ ಕಾಲದ ಸೇತುವೆಯಾಗಿದ್ದು, ಈ ಹಳೆಯ ಸೇತುವೆಯಲ್ಲಿ ಪ್ರಸ್ತುತ ಸರಕಾರ ಘನ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯ 2 ಬದಿಗಳಲ್ಲಿ ಕಬ್ಬಿಣದ ತಡೆಗಳನ್ನು ಹಾಕಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಈ ರಸ್ತೆಯಲ್ಲಿ ಸಾವರ್ಜನಿಕ ಲಘು ವಾಹನಗಳು ಮಾತ್ರ ಸಂಚರಿಸುತ್ತಿರುವುದಾಗಿದೆ.

ಜೂನ್. 9 ರಂದು ಕೆಎ.19.ಎಇ.5621 ನೇ ವಾಹನವನ್ನು ಅದರ ಚಾಲಕರು ಸೇತುವೆಯ ಧಾರಣ ಸಾಮರ್ಥ್ಯ ದ ಬಗ್ಗೆ ಆಳವಡಿಸಿದ ಕಬ್ಬಿಣದ ತಡೆಯನ್ನು ಮುರಿದು ಹಾಕಿ ಸರಕಾರಕ್ಕೆ ಸುಮಾರು ರೂ 80,000 ದಷ್ಟು ನಷ್ಟವನ್ನು ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾವರ್ಜನಿಕ ಸೇತುವೆಯ ಉಪಯೋಗಕ್ಕೆ ಆಳವಡಿಸಿದ ಧಾರಣ ಸಾಮರ್ಥ್ಯ ದ ಬಗ್ಗೆ ಆಳವಡಿಸಿದ ಕಬ್ಬಿಣದ ತಡೆ ಯನ್ನು ಮುರಿದು ಸರಕಾರಕ್ಕೆ ನಷ್ಟ ಉಂಟು ಮಾಡಿದ ಕೆಲವೆ ವಾಹನ ಮತ್ತು ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳವಂತೆ ಮುಖ್ಯಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.

About The Author

Leave a Reply