ಮನೆಗೆ ನುಗ್ಗಿ ಮಲಗಿದ್ದಾತನ ಮೇಲೆಯೇ ಕತ್ತಿಯಿಂದ ಹಲ್ಲೆ..!!

ಉಡುಪಿ: ನಡುರಾತ್ರಿ ದುಷ್ಕರ್ಮಿಯೋರ್ವ ತಂದೆ ಹಾಗೂ ಅಪ್ರಾಪ್ತ ಮಗಳು ಮನೆಯಲ್ಲಿ ಮಲಗಿದ್ದ ಸಂದರ್ಭ ತಂದೆಗೆ ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ.

ಕೂಲಿ ಕಾರ್ಮಿಕರ ಕರಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕಾರ್ಮಿಕ ಕುಮಾರ್ ಹಲ್ಲೆ ನಡೆಸಿದ ದುಷ್ಕರ್ಮಿ. ತಂದೆ ಮಗಳು ಮಲಗಿರುವ ಸಮಯ ನಡುರಾತ್ರಿ ಕತ್ತಿ ಹಿಡಿದು ಬಂದ ಕುಮಾರ್ ಮಲಗಿದಲ್ಲಿಯೇ ಹಲ್ಲೆ ನಡೆಸಿದ್ದಾನೆ. ಎಚ್ಚರಗೊಂಡ ಮಗಳು ಬೊಬ್ಬೆ ಹಾಕಿದ್ದು ಸ್ಥಳೀಯರು ಆಗಮಿಸಿ ವಿಶು ಶೆಟ್ಟಿ ಯವರಿಗೆ ಮಾಹಿತಿ ನೀಡಿದ್ದಾರೆ.

ಹಲ್ಲೆಗೊಳಗಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪ್ರಕರಣದ ಬಗ್ಗೆ ವಿಶು ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿ ಕುಮಾರನನ್ನು ಬಂಧಿಸಿ ಹಲ್ಲೆ ಮಾಡಿದ ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Reply