August 30, 2025
WhatsApp Image 2025-06-19 at 10.33.49 AM

ರಾಜ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿಯ ಎಂಬಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.

ಅಭಿಜ್ಞಾ (8) ಅವನಿ (6) ಆರ್ಯ (4) ಎಂಬ ಮಕ್ಕಳ ಜೊತೆಗೆ ತಾಯಿ ಸಿದ್ದಮ್ಮ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿದ ಬಳಿಕ ತಾನು ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಮೂಲದ ಸಿದ್ದಮ್ಮ ಪತಿಯ ಜೊತೆಗೆ ಕುರಿ ಮೇಯಿಸಲು ಬಂದಿದ್ದರು. ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಬರದನಹಳ್ಳಿಯ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಕುರಿ ಮಂದೆ ಹಾಕಿದ್ದರು. ನಿನ್ನೆ ಸಿದ್ದಮ್ಮ ಪತಿ ಕುಮಾರ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯ ನಂತರ ಸಿದ್ದಮ್ಮ ತನ್ನ ಮೂವರು ಮಕ್ಕಳ ಜೊತೆ ಸೇರಿ ಕುರಿ ಮೇಯಿಸಲು ತೆರಳಿದ್ದಾಳೆ.

ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಸಿದ್ದಮ್ಮ ಹಾರಿದ್ದಾಳೆ. ಸಂಜೆಯಾದರೂ ಕುರಿಗಳು ಮತ್ತು ಪತ್ನಿ ಮಕ್ಕಳು ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಕುಮಾರ್ ಹುಡುಕಾಟ ನಡೆಸಿದ್ದಾನೆ. ಕೃಷಿ ಹೊಂಡದ ಬಳಿಗೆ ನಿಂತಿದ್ದ ಕುರಿಗಳನ್ನು ನೋಡಿ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿ ಮಕ್ಕಳು ಕಾಣದಿದ್ದಾಗ ಕೃಷಿ ಹೊಂಡದಲ್ಲಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ತಕ್ಷಣ ಕುಮಾರ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ.ಸಿದ್ದಮ್ಮ ಸಹೋದರನ ದೂರಿನ ಅನ್ವಯ ಕುರುಗೋಡು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

About The Author

Leave a Reply