February 12, 2026
WhatsApp Image 2025-06-23 at 9.10.36 AM

 ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮತ್ತಿಘಟ್ಟ ಬಳಿಯ ಜೋಗನ ಹಕ್ಕಲು ಜಲಪಾತ ನೋಡಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಸೋಮನಳ್ಳಿ ಗ್ರಾಮದ ಪವನ್ ಗಣಪತಿ ಜೋಗಿ (24) ನಾಪತ್ತೆಯಾಗಿದ್ದಾನೆ.

ಸ್ನೇಹಿತ ವಾಸುದೇವ್ ಜೊತೆ ಫಾಲ್ಸ್ ನೋಡಲು ಹೋಗಿದ್ದ ಪವನ್ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

About The Author

Leave a Reply