August 30, 2025
WhatsApp Image 2025-06-23 at 5.36.10 PM

ಬೆಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರ ಹೈಡ್ರಾಮಾವೇ ನಡೆದಿದೆ. ಐಎಎಸ್ ಅಧಿಕಾರಿಗಳು ಹೊಡೆಯಲು ಬಂದಿದ್ದಾಗಿ ಆರೋಪಿಸಿದಂತ ವ್ಯಕ್ತಿಯೊಬ್ಬ, ಕಿರುಚಾಡಿದ್ದರಿಂದ ಕೆಲ ಕಾಲ ಡಿಸಿ ಕಚೇರಿಯಲ್ಲಿ ಹೈಡ್ರಾಮಾವೇ ನಡೆಯಿತು. ಸ್ಥಳದಲ್ಲಿದ್ದಂತ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಕರೆದೊಯ್ದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ದೇಶಭಕ್ತಿ ವೀಡಿಯೋ ನೋಡುತ್ತಿದ್ದೆ. ಅದಕ್ಕೆ ನನಗೆ ಐಎಎಸ್ ಅಧಿಕಾರಿ ಒದಿಯೋಕೆ ಬಂದ್ರು ಅಂತ ಆರೋಪಿಸಿದರು.

ಸ್ಥಳದಲ್ಲಿದ್ದಂತ ಪೊಲೀಸರು ಹತ್ತಿರ ಹೋಗುತ್ತಿದ್ದಂತೆ ಅವರ ಮುಂದೆ ಒದ್ದಾಡಿ ಕಿರುಚಾಡಿದರು. ವ್ಯಕ್ತಿಯ ಕಿರುಚಾಟದಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ಕೂಡ ಸೃಷ್ಠಿಯಾಗಿತ್ತು. ಕೊನೆಗೆ ಆತನನ್ನ ವಶಕ್ಕೆ ಪಡೆದಂತ ಪೊಲೀಸರು ಅಲ್ಲಿಂದ ಕರೆದೊಯ್ದರು.

About The Author

Leave a Reply