November 8, 2025
thmb-2025-06-28T104310.458

ಮಂಗಳೂರು ಜೂನ್ 28: ಮೊದಲೆ ಆರ್ ಟಿಓ ಕಚೇರಿಯಲ್ಲಿ ಭ್ರಷ್ಟಾಚಾರ ಅತೀ ಹೆಚ್ಚು, ಪ್ರತಿಯೊಂದಕ್ಕೂ ಲಂಚ ಇಲ್ಲದೆ ಕೆಲಸವೇ ನಡೆಯುವುದಿಲ್ಲ ಎಂಬ ಆರೋಪದ ಇದೆ. ಇದೀಗ ರಾಜ್ಯದ ಬೊಕ್ಕಸಕ್ಕೆ ಸಿಗುವ ಹಣವನ್ನು ನುಂಗುವ ಹಂತಕ್ಕೆ ಆರ್ ಟಿಓ ಅಧಿಕಾರಿಗಳು ಹೊಗಿದ್ದಾರೆ. ಕೋಟಿ ಬೆಲೆಬಾಳುವ ಕಾರನ್ನು ಅದರ ಅದರ ದಾಖಲೆಗಳನ್ನು ಮಾರ್ಪಾಡು ಮಾಡಿ ಕಡಿಮೆ ಬೆಲೆ ನಮೂದಿಸಿ ಕಡಿಮೆ ತೆರಿಗೆ ಕಟ್ಟುವ ಹಾಗೆ ಮಾಡಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಯ ನಷ್ಟವನ್ನು ಆರ್ ಟಿಓ ಅಧಿಕಾರಿಗಳು ಮಾಡಿರುವ ಘಟನೆ ನಡೆದಿದೆ.

ಈ ಪ್ರಕರಣ ಹೊರ ಬರುತ್ತಿದ್ದಂತೆ ಮಂಗಳೂರಿನ ಉಪ ಸಾರಿಗೆ ಆಯುಕ್ತರ ಕಚೇರಿಯ ಮೂವರನ್ನು ಅಮಾನತುಗೊಳಿಸಲಾಗಿದೆ.  ಮಂಗಳೂರು ಉಪ ಸಾರಿಗೆ ಆಯುಕ್ತರ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ, ಅಧೀಕ್ಷಕಿ ರೇಖಾ ನಾಯಕ್, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ.ಎಚ್. ಅಮಾನತುಗೊಂಡವರು.

ಮರ್ಸಿಡಿಸ್ ಬೆನ್ ಕಾರಿಗೆ ಸಂಬಂಧಿಸಿದಂತೆ 01.01.2017ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಎಲೆಕ್ಟ್ರಾನಿಕ್ ಸಿಟಿ ಕಚೇರಿಯಿಂದ ಮಂಗಳೂರು ಕಚೇರಿಗೆ ತಾತ್ಕಾಲಿಕ ನೋಂದಣಿ ಪತ್ರವನ್ನು ನಿಹಾಲ್‌ ಅಹಮದ್ ಹೆಸರಿನಲ್ಲಿ₹1,96,95,000ಕ್ಕೆ ಇನ್‌ವಾಯಿಸ್ ನೀಡಲಾಗಿದೆ. ಈ ತಾತ್ಕಾಲಿಕ ನೋಂದಣಿಯ ವಿವರಗಳನ್ನು 24.12.2024ರಂದು ಮಂಗಳೂರು ಕಚೇರಿಯಲ್ಲಿ ಮಾರ್ಪಾಡುಗೊಳಿಸಿ, ಈ ಕಾರಿನ ಮಾರಾಟ ಮೊತ್ತ ₹32,15,000 ಎಂದು ನಮೂದಿಸಲಾಗಿದೆ. ಈ ಅಕ್ರಮವೆಸಗಿದ ಕಾರಣಕ್ಕಾಗಿ ಈ ಮೂವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಎ.ಎಂ. ಅವರು ಹೊರಡಿಸಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

About The Author

Leave a Reply