
ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ನಾರ್ಶ ವಾರ್ಡ್‌ನ ಕೋಡಿ–ನೀರಪಳಿಕೆ ಕಬಕ ಉಸ್ತಾದರ ನೇತೃತ್ವದ ಪರಿಸರ ನಿವಾಸಿಗಳು ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಮತ್ತು ನಂತರದಲ್ಲಿ ನಿರಂತರ ಬೇಡಿಕೆಗೆ ಸ್ಪಂದಿಸಿ ಮಣ್ಣಿನ ರಸ್ತೆಯು ಇದೀಗ ಕಾಂಕ್ರೀಟಿಕರಣಗೊಂಡು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಯೋಗ್ಯವಾಗಿರುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಅಭಿವೃದ್ಧಿ ಕಾರ್ಯವು, ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದನೆ ನೀಡಿದಂತಾಗಿದೆ

ಉದ್ಘಾಟನೆಯು ದಿನಾಂಕ 01-07-2025 ಮಂಗಳವಾರದಂದು, ನೂರಾರು ನಾಗರೀಕರ ಸಮ್ಮುಖದಲ್ಲಿ, ದರ್ಮಗುರುಗಳಾದ ಕಬಕ ಉಸ್ತಾದ್ ಅವರ ದಿವ್ಯ ಹಸ್ತದಿಂದ ನೆರವೇರಿತು. (ಧಾರ್ಮಿಕ ಕಾರಣದಿಂದಾಗಿ ಅವರ ಛಾಯಾಚಿತ್ರವನ್ನು ಪ್ರಕಟಿಸಲಾಗಿಲ್ಲ).

ಈ ರಸ್ತೆ ಕಾಮಗಾರಿ, ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಮಾಜಿ ಅಧ್ಯಕ್ಷರೂ ಹಾಗೂ ಅಭಿವೃದ್ಧಿ ಹರಿಕಾರರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, ಸುಮಾರು ₹5 ಲಕ್ಷಗಳ ಅನುದಾನವನ್ನು ಇತರ ಮೂಲಗಳಿಂದ ಕ್ರೂಡೀಕರಿಸಿ ಪಂಚಾಯತ್‌ನ ಸಹಯೋಗದೊಂದಿಗೆ ಮಾಡಲಾಯಿತು.

ಉಪಸ್ಥಿತರಿದ್ದ ಗಣ್ಯರು:
ಉದ್ಘಾಟನಾ ಸಮಾರಂಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಕೆ. ಸಾಲೆತ್ತೂರು, ಉಪಾಧ್ಯಕ್ಷ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ, ದ.ಕ. ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಾಗೂ ಸ್ಥಳೀಯ ಸದಸ್ಯ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಪೀಝ್ ಸಾಲೆತ್ತೂರು, ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಖಾದರ್ ನಾರ್ಶ, ಕಾಂಗ್ರೆಸ್ ಮುಖಂಡ ಯಾಕೂಬ್ ನಾರ್ಶ, ಮಾಜಿ ಪಂಚಾಯತ್ ಸದಸ್ಯ ಗಂಗಾಧರ ಚೌಟ, NSUI ಪ್ರತಿನಿಧಿ ಸಪ್ವಾನ್ ತಾಳಿತ್ತನೂಜಿ, ಗುತ್ತಿಗೆದಾರರು ಡಿ.ಕೆ. ಅಶ್ರಫ್ ಪುತ್ತೂರು, ಶಾಫಿ ಬಾರೆಬೆಟ್ಟು, ಸಲಾಂ ಕೋಡಿ, ಜುನೈದ್ ಕೋಡಿ, ಮನ್ಸೂರು ಕೋಡಿ, ಶರೀಪ್ ಕಾಪಿಕಾಡ್, ಶರೀಪ್ ಪಡ್ಪು, ಕೂಸಪ್ಪ ಸಫಲ್ಯ ಗಾಣದಮೂಲೆ, ಬಾಲಕೃಷ್ಣ ಗಾಣದಮೂಲೆ, ಜಯಪ್ರಸಾದ್ ತಾಳಿತ್ತನೂಜಿ,ಯೂಸುಪ್ ತಾಳಿತ್ತನೂಜಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ದೇಶ:
ಉದ್ಘಾಟನಾ ವೇದಿಕೆ ತಾಳಿತ್ತನೂಜಿ ಕಬಕ ಉಸ್ತಾದರ ನಿವಾಸದ ಸಭಾಂಗಣದಲ್ಲಿ ನೇರವೇರಿದ್ದು,ಸಮಾರಂಭವನ್ನು ಉದ್ದೇಶಿಸಿ ಅನುದಾನ ರುವಾರಿ ಸುಭಾಶ್ಚಂದ್ರ ಶೆಟ್ಟಿ ಈ ವಾರ್ಡಿನಲ್ಲಿ ಶಾಸಕರು,ಜಿ.ಪಂಚಾಯತ್,ತಾಲೂಕು ಪಂಚಾಯತ್,ಅನುದಾನಗಳು ಇಲ್ಲದಿದ್ದರೂ ಇತರ ಅನುದಾನಗಳನ್ನು ಕ್ರೂಡಿಕರೀಸಿ ಗರಿಷ್ಠ ಪ್ರಮಾಣದ ಅಭಿವೃದ್ದಿ ಮಾಡಲಾಗಿದೆ.ನಮ್ಮ ಸಹ ಸದಸ್ಯರಾದ ಅಸ್ಮ ಹಸೈನಾರ್,ದೇವಕ್ಕಿ.ಎ. ಅಲ್ಪ ಅವಧಿ ಮಾತ್ರ ಬಾಕಿಯಿದ್ದು,ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ತಿಳಿಸಿದರು.ಈ ಅನುದಾನಕ್ಕೆ ನನ್ನೊಂದಿಗೆ ಸಹಕರಿಸಿದ ಕಾಂಗ್ರೇಸ್ ಕಾರ್ಯಕರ್ತರಾದ ಹಸೈನಾರ್ ತಾಳಿತ್ತನೂಜಿ,ಸೋಮಶೇಖರ ಗೌಡ ರನ್ನು ನೆನಪಿಸಿಕೊಂಡರು.ನಂತರ ಅದ್ಯಕ್ಷರಾದ ಅಶ್ರಪ್ ಸಾಲೆತ್ತೂರು ಸಂದರ್ಬೋಚಿತವಾಗಿ ಮಾತಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಹಸೈನಾರ್ ತಾಳಿತ್ತನೂಜಿ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಸಹ ಹಸೈನಾರ್ ತಾಳಿತ್ತನೂಜಿ ನೆರವೇರಿಸಿದರು. ಬೂತ್ ಅಧ್ಯಕ್ಷ ಸೋಮಶೇಖರ ಗೌಡ ಧನ್ಯವಾದ ಅರ್ಪಿಸಿದರು.
ಕಬಕ ಉಸ್ತಾದರಿಂದ ಅಭಿವೃದ್ಧಿಗೆ ಶ್ಲಾಘನೆ:
ಈ ಸಂದರ್ಭದಲ್ಲಿ ಕಬಕ ಉಸ್ತಾದ್ ಅವರು, ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಅಧ್ಯಕ್ಷ ಅಶ್ರಫ್ ಕೆ.ಸಾಲೆತ್ತೂರು, ಹಸೈನಾರ್ ತಾಳಿತ್ತನೂಜಿ, ಸೋಮಶೇಖರ್ ಗೌಡ ತಾಳಿತ್ತನೂಜಿ, ಹಾಗೂ ಗುತ್ತಿಗೆದಾರ ಡಿ.ಕೆ. ಅಶ್ರಫ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸಮಾರಂಭದ ಕೊನೆಯಲ್ಲಿ ಕಬಕ ಉಸ್ತಾದ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ (ದುಆ) ನಡೆಯಿತು ಹಾಗೂ ಅವರ ವತಿಯಿಂದ ಬೋಜನ ವ್ಯವಸ್ಥೆ ಕಲ್ಪಿಸಲಾಯಿತು.