November 8, 2025
WhatsApp Image 2025-07-01 at 12.08.33 PM

ಮಂಗಳೂರು: ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣವನ್ನು ಸೊಸೈಟಿ ಮ್ಯಾನೇಜರ್‌ ಎಗರಿಸಿ ಬೇರೆ ಸೊಸೈಟಿಯಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಹಕಾರಿ ಸಂಘದ ಮ್ಯಾನೇಜರ್‌ ಪ್ರೀತೇಶ್‌ ಪ್ರಮುಖ ಆರೋಪಿ. ಆತನಿಗೆ ಸಹಕಾರ ನೀಡಿದ ಶೇಖ್‌ ಮಹಮ್ಮದ್‌ ಎಂಬಾತನನ್ನೂ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರಿಗೆ ಶೋಧ ನಡೆಯುತ್ತಿದೆ.

ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಹಕಾರಿ ಸಂಘದ ಲಾಕರ್‌ನಿಂದ ಚಿನ್ನಾಭರಣವನ್ನು ಎಗರಿಸಿ ತನ್ನ ಆಪ್ತರ ಮೂಲಕ ಶಕ್ತಿನಗರದಲ್ಲೇ ಇರುವ ಇನ್ನೊಂದು ಸಹಕಾರ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ. ಆರೋಪಿಯ ವಂಚನೆಯ ಮಾಹಿತಿ ಸಹಕಾರ ಸಂಘದೊಳಗೆ ಕೆಲವರಿಗೆ ಗೊತ್ತಾಗುತ್ತಿದ್ದಂತೆ ಪ್ರೀತೇಶ್‌ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿದೇಶಕ್ಕೆ ಪರಾರಿಯಾಗಿದ್ದ. ಇದನ್ನರಿತ ಗ್ರಾಹಕರು ಸಂಘಕ್ಕೆ ಬಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ್ದು, ಜೂ. 17ರಂದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು.

ಇದರಿಂದ ಹೆದರಿದ ಆರೋಪಿ ಪ್ರೀತಮ್‌ ವಿದೇಶದಿಂದ ಮಂಗಳೂರಿಗೆ ಬಂದು ವಕೀಲರ ಮೂಲಕ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿಯ ಹೆಚ್ಚಿನ ವಿಚಾರಣೆಗೆ ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ.

ನಕಲಿ ಚಿನ್ನ ವಶಕ್ಕೆ ಆರೋಪಿ ಪ್ರೀತಮ್‌ ಬ್ಯಾಂಕ್‌ನಿಂದ ಚಿನ್ನವನ್ನು ಎಗರಿಸಿ 3.5 ಕೋಟಿ ರೂ. ಸಾಲ ಪಡೆದ ಬಳಿಕ ಆ ಚಿನ್ನದ ಬದಲಿಗೆ ಅದೇ ಮಾದರಿಯ ನಕಲಿ ಚಿನ್ನವನ್ನು ಇಟ್ಟು ಗ್ರಾಹಕರಿಗೆ ಮೋಸ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ 3.5 ಕೆ.ಜಿ.

About The Author

Leave a Reply