
ಮಂಗಳೂರು: ಚಲಿಸುತ್ತಿರುವ ಕಾರಿನ ಡೋರ್ ನಲ್ಲಿ ನಿಂತು ಸ್ಟಂಟ್ ಮಾಡಿದ ಪುಂಡರಿಗೆ ಪೊಲೀಸರು ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ವಲಚ್ಚಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 73 ಯಲ್ಲಿ ಯುವಕರು ಚಲಿಸುತ್ತಿರುವ ಕಾರಿನಿಂದ ಹೊರಗೆ ಬಂದು ಡ್ಯಾನ್ಸ್ ಮಾಡಿದ್ದರು.ಇದರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ಯುವಕರು ಹಾಗೂ ವಾಹನವನ್ನು ದಿನಾಂಕ 01-07-2025 ರಂದು ಪತ್ತೆ ಹಚ್ಚಿ, ಯುವಕರನ್ನು ವಿಚಾರಣೆಯನ್ನು ನಡೆಸಿ ಎಚ್ಚರಿಕೆ ನೀಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ರೂ – 6500/- ದಂಡವನ್ನು ವಿಧಿಸಿದ್ದಾರೆ.
