August 25, 2025
WhatsApp Image 2025-07-05 at 10.42.30 AM

ಮಂಗಳೂರು: ತನ್ನ ಪ್ರೇಯಸಿಯನ್ನು ಗರ್ಭಿಣಿ ಯಾಗಿಸಿ ಬಳಿಕ ಮದುವೆಗೆ ನಿರಾಕರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ. ರಾವ್ ಎಂಬಾತನನ್ನು ಪೊಲೀಸರು ಮೈಸೂರು ಜಿಲ್ಲೆಯ ತಿ.ನರಸೀಪುರ ಎಂಬಲ್ಲಿಂದ ವಶಕ್ಕೆ ಪಡೆದಿದ್ದಾರೆ.

ಕೃಷ್ಣ ಜೆ.ರಾವ್ ತನ್ನ ಪ್ರೌಢಶಾಲಾ ದಿನಗಳಿಂದಲೇ ಪರಿಚಯವಾಗಿದ್ದ ಸಹಪಾಠಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಬಳಿಕ ಯುವತಿಯನ್ನು ಮನೆಗೆ ಕರೆಸಿ‌ ದೈಹಿಕ ಸಂಪರ್ಕ ಬೆಳೆಸಿದ್ದು, ಪರಿಣಾಮ ಯುವತಿ ಗರ್ಭಿಣಿಯಾಗಿದ್ದಳು.

ಈ ಬಗ್ಗೆ ಯುವತಿ ಮನೆಯವರು ಯುವಕನ ಮನೆಯವರಲ್ಲಿ ಹೇಳಿದ್ದು, ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು. ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವಕನ ಮನೆಯವರು ಮದುವೆ ಒಪ್ಪಿದ್ದರು ಎನ್ನಲಾಗಿದೆ.

ಆದರೆ ಯುವತಿ ತುಂಬು ಗರ್ಭಿಣಿಯಾಗುತ್ತಿದ್ದಂತೆ ಯುವಕನ ಮನೆಯವರು ಮದುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ. ಈ ನಡುವೆ ಆರೋಪಿ ಕೃಷ್ಣ ಜೆ.ರಾವ್ ಪರಾರಿಯಾಗಿದ್ದು, ಯುವತಿ ಮಗುವಿಗೆ ಜನ್ಮ ನೀಡಿದ್ದಳು.

ಪ್ರಕರಣ ಪುತ್ತೂರಿನಾದ್ಯಂತ ತೀವ್ರ ತಲ್ಲಣ ಸೃಷ್ಟಿಸಿತ್ತು. ಇದೀಗ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

About The Author

Leave a Reply