ಪುತ್ತೂರು ನಗರಸಭೆ ಸದಸ್ಯ ಪಿ.ಜಿ. ಜಗನ್ನೀವಾಸ್ ರಾವ್ ಬಂಧನದ ಬೆನ್ನಲ್ಲೇ ಜಾಮೀನು..!!

ಪುತ್ತೂರು: ಪಿ.ಜಿ. ಜಗನ್ನೀವಾಸ್ ರಾವ್ ಅವರ ಬಂಧನದ ಬೆನ್ನಲ್ಲೇ, ಅವರಿಗೆ ಜಾಮೀನು ಮಂಜೂರಾಗಿದೆ.

ಶ್ರೀಕೃಷ್ಣ ರಾವ್ ತಲೆಮರೆಸಿಕೊಳ್ಳಲು ಪಿ.ಜಿ. ಜಗನ್ನೀವಾಸ್ ರಾವ್ ಅವರು ಸಹಕರಿಸಿದ್ದರು ಎನ್ನುವ ಆರೋಪದಡಿ ಬಂಧಿಸಲಾಗಿತ್ತು. ಈ ಬಗ್ಗೆ ಎಸ್.ಪಿ. ಅವರು ವೀಡಿಯೋ ಹೇಳಿಕೆಯನ್ನೂ ನೀಡಿದ್ದರು.

ಬಂಧನದ ಸ್ವಲ್ಪ ಹೊತ್ತಿನಲ್ಲೇ ಪಿ.ಜಿ. ಜಗನ್ನೀವಾಸ್ ರಾವ್ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ ಎಂದು ತಿಳಿದುಬಂದಿದೆ. ಪಿ.ಜಿ. ಜಗನ್ನೀವಾಸ್ ರಾವ್ ಅವರ ಪುತ್ರ, ಆರೋಪಿ ಶ್ರೀಕೃಷ್ಣ ರಾವ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply