August 24, 2025
WhatsApp Image 2025-07-05 at 4.16.04 PM

ಬಸ್ ಮೇಲೆ ಕಲ್ಲು ತೂರಾಟ ತೂರಾಟ ಮಾಡಿದ್ದ ಪ್ರಕರಣದ ತನಿಖೆಗೆ ತೆರಳಿದ್ದ ಪೊಲೀಸರೇ ದಂಗಾಗಿದ್ದು, ಹಿಂದೂ ಮುಖಂಡನ ಮೊಬೈಲ್‌ನಲ್ಲಿ ರಾಜಕಾರಣಿ ಒಬ್ಬರ ಅಶ್ಲೀಲ ವಿಡಿಯೊ ಪತ್ತೆಯಾಗಿದೆ ಹೇಳಲಾಗಿದೆ.

ಹಿಂದೂ ಮುಖಂಡನ ಮೊಬೈಲ್‌ನಲ್ಲಿ ಕಾರಣಿ ಒಬ್ಬರ ಅಶ್ಲೀಲ ವಿಡಿಯೊ ಪತ್ತೆ ಆಗಿರುವ ಬಗ್ಗೆ ಕರಾವಳಿ ಯಲ್ಲಿ ಭಾರಿ ಸುದ್ದಿಗೆ ಕಾರಣವಾಗಿದ್ದು, ಮಂಗಳೂರು ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಮೊಬೈಲ್‌ನಲ್ಲಿ ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೊಗಳು ಪತ್ತೆಯಾಗಿದೆ.

ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೊ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಮೂಡಬಿದಿರೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇನ್ನು ಈ ಹಿಂದೆ ಅಪಘಾತವೆಸಗಿದ ಖಾಸಗಿ ಬಸ್‌ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್ ರಾಜ್ ಧರೆಗುಡ್ಡರನ್ನು ಮೂಡಬಿದಿರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಯ ಮೊಬೈಲ್ ವಶಕ್ಕೆ ಪಡೆದಿದ್ದರು. ಪೊಲೀಸರು ದತ್ತಾಂಶಗಳನ್ನು ಎಕ್ಸಾಕ್ಟ್ ಮಾಡಿಸಲು ಕೋರ್ಟ್ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆದಿದ್ದರು. ಅದರಂತೆ ಮೊಬೈಲ್ ಡೇಟಾ ಎಕ್ಸಾಕ್ಟ್ ವೇಳೆ ಸ್ವತಃ ಪೊಲೀಸರೇ ಬೆಚ್ಚಿ ಬಿದಿದ್ದಾರೆ.ಈ ಪೈಕಿ ಆ ಭಾಗದ ಪ್ರಮುಖ ರಾಜಕಾರಣಿಯ ಅಶ್ಲೀಲ ವಿಡಿಯೊ ಕೂಡ ಪತ್ತೆಯಾಗಿದೆ ಎಂದು ಹೇಳಲಾಗಿದೆ.

About The Author

Leave a Reply