August 25, 2025
WhatsApp Image 2025-05-19 at 1.32.58 PM

2020ರಲ್ಲಿ ಮುಲ್ಕಿಯ ಎಚ್ ಡಿ ಎಫ್ ಸಿ ಬ್ಯಾಂಕಿನ ಎದುರುಗಡೆ ಯುವ ಉದ್ಯಮಿ ಅಬ್ದುಲ್ ಲತೀಫ್ ಎನ್ನುವವರ ಹತ್ಯೆಯ ಆರೋಪವನ್ನು ಹೋರಿಸಿ ಸುಮಾರು ಹತ್ತು ಜನರ ಮೇಲೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ, ಪ್ರಕರಣವು ಮಾನ್ಯ ಆರನೇ ಜಿಲ್ಲಾ ನ್ಯಾಯಾಲಯ ಮಂಗಳೂರಿನಲ್ಲಿ ವಿಚಾರಣೆಯಲ್ಲಿದೆ, ಈ ಹಿಂದೆ ಇದೇ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಾರಿಯಾದ ಜಾಮೀನನ್ನು ಮಾನ್ಯ ಹೈಕೋರ್ಟ್ ರದ್ದುಪಡಿಸಿದ್ದು ಸುಪ್ರೀಂ ಕೋರ್ಟ್ ನಲ್ಲಿ ಸದ್ರಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾದಾಗ ಮಾನ್ಯ ಸುಪ್ರೀಂ ಕೋರ್ಟ್ ಹೈಕೋರ್ಟ್ ರದ್ದುಪಡಿಸಿದ ಆದೇಶವನ್ನು ಎತ್ತಿ ಹಿಡಿದು ಸದ್ರಿ ಅರ್ಜಿಯನ್ನು ತಿರಸ್ಕಾರ ಮಾಡಿರುತ್ತದೆ. ಇದೀಗ ಆರೋಪಿ ಮೊಹಮ್ಮದ್ ರಾಜೀಮ್ ಮಾನ್ಯ ಹೈಕೋರ್ಟಿನ ಮುಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಮಾನ್ಯ ಹೈಕೋರ್ಟ್ ಸದ್ರಿ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿ ಜಾಮಿನಿನ ಮೇಲೆ ಬಿಡುಗಡೆ ಮಾಡಿ ಆದೇಶ ಹೊರಡಿಸಿರುತ್ತದೆ.

ಆರೋಪಿಯ ಪರವಾಗಿ ಹೈಕೋರ್ಟಿನ ಖ್ಯಾತ ಹಿರಿಯ ವಕೀಲರಾದ ಅರುಣ್ ಶ್ಯಾಮ್, ಸುಯೋಗ್ ಹೇರಳೆ, ಮತ್ತು ಮಹಮ್ಮದ್ ಅಸ್ಗರ್ ಮುಡಿಪು ವಾದವನ್ನು ಮಂಡಿಸಿರುತ್ತಾರೆ.

About The Author

Leave a Reply