
ಜಗತ್ತು ಮಹಿಳೆಯರಿಗೆ ಕೆಲವೇ ಆಯ್ಕೆಗಳನ್ನು ನೀಡುತ್ತಿದ್ದ ಸಮಯದಲ್ಲಿ , ದೂರದೃಷ್ಟಿ, ಪ್ರೀತಿ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ದೃಢ ಸಂಕಲ್ಪದೊಂದಿಗೆ ಪ್ರಾರಂಭವಾದ ಸಂತ ಆಗ್ನೇಸ್ ಕಾಲೇಜು ತನ್ನ ಅನುಕೂಲಕ್ಕಾಗಿ ಹುಟ್ಟಿಲ್ಲ, ಬದಲಾಗಿ ದೃಢ ನಿಶ್ಚಯದಿಂದ ಹುಟ್ಟಿಕೊಂಡಿತು ಎಂದು ಬೆಂಗಳೂರು ಕ್ರೆಸ್ಟ್ (ಡೀಮ್ಡ್) ವಿಶ್ವವಿದ್ಯಾನಿಲಯದ ಉಪಕುಲಪತಿ ರೆ.ಫಾ.ಡಾ. ಜೋಸೆಫ್ ಹೇಳಿದರು.
ಬೆಂದೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ೧೨ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅಥಿತಿಯಾಗಿ ಮಾತನಾಡಿದರು.


“ಘಟಿಕೋತ್ಸವ” ಎಂಬ ಪದವು ಕೇವಲ ಅಂತ್ಯವನ್ನು ಸೂಚಿಸುವುದಿಲ್ಲ . ಕೆಲವು ದೇಶಗಳಲ್ಲಿ ಘಟಿಕೋತ್ಸವವನ್ನು ಪ್ರಾರಂಭ ಎಂದು ಕರೆಯಲಾಗುತ್ತದೆ. ಇದರ ಅರ್ಥ ಪ್ರಾರಂಭ, ಹೊಸ ಆರಂಭ, ಇದು ಕೇವಲ ಒಂದು ಅಧ್ಯಾಯವನ್ನು ಮುಚ್ಚುವ ಸಮಾರಂಭವಲ್ಲ, ಹೊಸದನ್ನು ಆರಂಭಿಸಲು ಆಹ್ವಾನ – ಧೈರ್ಯದಿಂದ , ಸ್ಪಸ್ಟತೆಯೊಂದಿಗೆ ಪದವಿಯನ್ನು ಪಡೆದು ಬದುಕಿನಲ್ಲಿ ವಿಜಯಶಾಲಿಗಳಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪೋಸ್ಟೊಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತದ ಪ್ರಾಂತೀಯ ಸುಪೀರಿಯರ್ ಸಿ. ಮರಿಯಾ ನವೀನ ಎ.ಸಿ. ಮಾತನಾಡಿ ಸಂತ ಆಗ್ನೇಸ್ ಕಾಲೇಜು ಶತಮಾನದಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದ ಸಂಸ್ಥೆಯಾಗಿದೆ ಪಠ್ಯದ ಜೊತೆಗೆ ನೈತಿಕತೆ, ಪ್ರೀತಿ, ಮೊದಲಾದ ಮೌಲ್ಯಗಳು ಅಗತ್ಯ. ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ ವಿದ್ಯಾರ್ಥಿಗಳು ಅಭಿವೃದ್ಧಿಯಾಗಬೇಕು ಎಂದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ 600 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಉನ್ನತ ರ್ಯಾಂಕ್ ಗಳಿಸಿದ 19 ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪ್ರಾಶುಂಪಾಲೆ ಸಿ. ಡಾವೆನಿಸ್ಸಾ ಎ.ಸಿ. ಅವರು ನೂತನ ಪದವೀಧರರಿಗೆ ಪ್ರತಿಜ್ನಾ ವಿಧಿ ಬೋಧಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಪ್ರೋ. ಶುಭರೇಖಾ, ಸಂತ ಆಗ್ನೇಸ್ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಸಿ. ಡಾ. ಮರಿಯಾ ರೂಪಾ ಎ.ಸಿ. ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಐ ಕ್ಯೂ ಎಸ್ಸಿ ಸಂಯೋಜಕಿ ಡಾ. ಸಬೀನಾ ಡಿಸೋಜಾ ಸ್ವಾಗತಿಸಿ, ಎಂ. ಬಿ. ಎ ವಿಭಾಗದ ಪ್ರೊ. ಶೆರ್ಲಿ ಪ್ರೀತಿಕಾ ವಂದಿಸಿದರು. ರಾಸಾಯನ ಶಾಸ್ತ್ರ ವಿಭಾಗದ ಡಾ. ಇಟಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.