February 18, 2026
WhatsApp Image 2025-07-16 at 12.12.51 PM

ಸಾಮಾನ್ಯವಾಗಿ ಲವ್ ಜಿಹಾದ್ ಎಂದ ತಕ್ಷಣ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ, ಓಡಿ ಹೋಗಿ ಮದುವೆ ಆಗೋದನ್ನ ಲವ್ ಜಿಹಾದ್ ಎಂದು ಕರೆಯುತ್ತಾರೆ. ಆದರೆ ಈಗ ಗದಗದಲ್ಲಿ ವಿಚಿತ್ರವಾದ ಘಟನೆ ಒಂದು ನಡೆದಿದ್ದು ಮುಸ್ಲಿಂ ಯುವತಿ ಒಬ್ಬಳನ್ನು ವಿವಾಹವಾದ ಹಿಂದು ಯುವಕ ಮದುವೆಯಾದ ಬಳಿಕ ಯುವತಿಯ ವಿರುದ್ಧ ಲವ್ ಜಿಹಾದ್ ಆರೋಪ ಮಾಡಿದ್ದಾನೆ. ಈ ಒಂದು ಘಟನೆ ಗದಗದಲ್ಲಿ ನಡೆದಿದ್ದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಹೌದು ಯುವಕನಿಗೆ ಯುವತಿಯಿಂದಲೇ ಲವ್ ಆರೋಪ ಕೇಳಿ ಬಂದಿದ್ದು, ಮುಸ್ಲಿಂ ಯುವತಿಯ ವಿರುದ್ಧ ಹಿಂದೂ ಯುವಕ ಗಂಭೀರವಾದ ಆರೋಪ ಮಾಡಿದ್ದಾನೆ. ತಹಸಿನ್ ಹೊಸಮನಿ ಎಂಬ ಯುವತಿ ಜೊತೆಗೆ ವಿಶಾಲ್ ಕುಮಾರ್ ಪ್ರೇಮ ವಿವಾಹ ಆಗಿದ್ದ. ಗದಗದ ಗಾಂಧಿನಗರದ ಸೆಟಲ್ಮೆಂಟ್ ಏರಿಯಾದ ನಿವಾಸಿಯಾಗಿರುವ ವಿಶಾಲ್ ಕುಮಾರ್ ನವೆಂಬರ್ 24 2024 ರಂದು ಈ ಇಬ್ಬರು ರಿಜಿಸ್ಟರ್ ಮದುವೆಯಾಗಿದ್ದರು.

ಮದುವೆ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆಗೆ ತಹಸೀನ್ ಒತ್ತಾಯಿಸಿದ್ದಾಳೆ. ಬಳಿಕ ಏಪ್ರಿಲ್ 25, 2025 ರಂದು ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆಯಾಗಿದ್ದಾರೆ. ಮದುವೆ ವೇಳೆ ಹೆಸರು ಬದಲಾವಣೆ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಆರೋಪಿಸಿದ್ದಾನೆ. ಮುಸ್ಲಿಂ ಸಂಪ್ರದಾಯದಂತೆ ಮದುವೆ ಆದ ವಿಡಿಯೋ ಕೂಡ ವೈರಲ್ ಆಗಿದೆ. ಈ ವೇಳೆ ಜಮಾತ್ ಗೆ ಹೋಗುವಂತೆ ತಹಸಿನ್ ಬಾನು ಮತ್ತು ಆಕೆಯ ತಾಯಿ ಬೇಗಂ ಒತ್ತಾಯ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಗಂಭೀರವಾದ ಆರೋಪ ಮಾಡಿದ್ದಾನೆ.

ಕೋರಮ ಸಮಾಜ ಬಿಟ್ಟು ಮುಸ್ಲಿಂ ಧರ್ಮ ಸ್ವೀಕರಿಸಲು ಒತ್ತಾಯಿಸಿದ್ದಾರೆ. ಇತ್ತೀಚಿಗೆ ಹಿಂದೂ ಸಂಪ್ರದಾಯದಂತೆ ಮದುವೆಗೆ ಒಪ್ಪಿಗೆ ನೀಡಿದ್ದ ತಹಸೀನ್ ಮೊದಲು ಒಪ್ಪಿಗೆ ನೀಡಿ ಬಳಿಕ ನಿರಾಕರಿಸಿದ್ದಾಳೆ. ಮತಾಂತರ ಆಗದಿದ್ರೆ ರೇಪ್ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಇಬ್ಬರ ವಿರುದ್ಧ ಕ್ರಮಕ್ಕೆ ಹಿಂದೂ ಸಂಘಟನೆ ಆಗ್ರಹಿಸಿದೆ. ಮತಾಂತರ ಕುರಿತು ಗದಗ ಎಸ್ಪಿಗೆ ಹಿಂದು ಸಂಘಟನೆಗಳು ಮನವಿ ಸಲ್ಲಿಸಿವೆ. ದೂರು ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

About The Author

Leave a Reply