November 9, 2025
WhatsApp Image 2025-07-16 at 3.14.40 PM

ಆಟೊ ಚಾಲಕನನ್ನು ಸೋಮವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಜಿಗಣಿ ಸಮೀಪದ ಹಿನ್ನಕ್ಕಿಯಲ್ಲಿ ವಾಸವಾಗಿದ್ದ ಮೈಸೂರು ಜಿಲ್ಲೆ ತಲಕಾಡು ಮೂಲದ ದರ್ಶನ್‌ (28) ಮೃತ ಆಟೊ ಚಾಲಕ ಎಂದು ತಿಳಿದುಬಂದಿದೆ.  ಬೆಂಗಳೂರು ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ದರ್ಶನ್‌ ತನ್ನ ಅಕ್ಕ, ಭಾವನೊಂದಿಗೆ ವಾಸವಾಗಿದ್ದ. ಸೋಮವಾರ ರಾತ್ರಿ ಭಾವವನ್ನು ಕೆಲಸಕ್ಕೆ ಬಿಟ್ಟು ಬೊಮ್ಮಸಂದ್ರ ಬಳಿ ಬಂದಾಗ ತಂಡವೊಂದು ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಡಿಸಿಪಿ ಸಾರಾ ಫಾತೀಮಾ, ಎಲೆಕ್ಟ್ರಾನಿಕ್‌ ಸಿಟಿ ಎಸಿಪಿ ಸತೀಶ್, ಹೆಬ್ಬಗೋಡಿ ಇನ್‌ಸ್ಪೆಕ್ಟರ್‌ ಸೋಮಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಶ್ವಾನದಳ ಮತ್ತು ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.

About The Author

Leave a Reply