
ಮಣಿಪಾಲದ ಈಶ್ವರ್ ನಗರದಲ್ಲಿರುವ ಅಪಾರ್ಟ್‌ಮೆಂಟ್ ಮೇಲೆ ಪೋಲಿಸರು ದಾಳಿ ನಡೆಸಿ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಬಯಲು ಮಾಡಿದ್ದಾರೆ.

ಜು. 16ರ ಸಂಜೆ ವೇಳೆ ಬಂದ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರೂಮ್ ನಂ. 103, ಮೊದಲ ಮಹಡಿ, ಮಾಲ್ಪಾ ಎಮರಾಲ್ಡ್ ಅಪಾರ್ಟ್‌ಮೆಂಟ್ಸ್, 20 ನೇ ಕ್ರಾಸ್, ಈಶ್ವರ್ ನಗರ, ಹೆರ್ಗಾ ವಿಲೇಜ್‌ನಲ್ಲಿ ದಾಳಿ ನಡೆಸಲಾಯಿತು.

ಅಕ್ರಮ ವಾಣಿಜ್ಯ ಲಾಭಕ್ಕಾಗಿ ಮಹಿಳೆಯನ್ನು ಬಲವಂತವಾಗಿ ಬಂಧಿಸಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ ಆಕೆಯನ್ನು ಆವರಣದಿಂದ ರಕ್ಷಿಸಲಾಯಿತು.

ಪ್ರಮುಖ ಆರೋಪಿ ಹೊನ್ನಾವರ ತಾಲೂಕಿನ ನಿವಾಸಿ ಗಣೇಶ್ ಗಣಪ್ ನಾಯಕ್ (38) ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎರಡನೇ ಶಂಕಿತ ಪರಾರಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.