ಟೆಲಿಗ್ರಾಂ ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ

ಉಡುಪಿ: ಮಹಿಳೆಯೋರ್ವರು ಅಧಿಕ ಲಾಭಾಂಶದ ಆಮಿಷಕ್ಕೆ ಬಲಿಯಾಗಿ, ಟೆಲಿಗ್ರಾಂ ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಸುಹಾಸಿನಿ ಎಂಬವರು ಮೋಸ ಹೋದ ಮಹಿಳೆ.‌ ಇವರ ವಾಟ್ಸಾಪ್ ಸಂಖ್ಯೆಗೆ ಯಾರೋ ಅಪರಿಚಿತರು ಮೆಸೇಜ್ ಕಳಿಸಿ ಟೆಲಿಗ್ರಾಂ ಗ್ರೂಪ್ ಗೆ ಸೇರುವಂತೆ ಲಿಂಕ್ ಕಳುಹಿಸಿದ್ದಾರೆ.

ಅದನ್ನು ನಂಬಿದ ಸುಹಾಸಿನಿ ಅವರು ಲಿಂಕ್ ಒತ್ತಿ ಜಾಯಿನ್ ಆಗಿ ನಂತರ ಹನ್ನೊಂದು ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣವೂ ನೀಡದೆ, ಲಾಭಾಂಶವನ್ನೂ ನೀಡದೆ ವಂಚಿಸಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply