
ಕೆಂಪು ಕಲ್ಲು ಮತ್ತು ಮರಳಿನ ಕೊರತೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ


ರಾಜ್ಯ ಸರ್ಕಾರದ ಕೆಂಪು ಕಲ್ಲು ಮತ್ತು ಮರಳಿಗೆ ಸಂಬಂಧಿಸಿದ ಹೊಸ ನಿಯಮಗಳಿಂದ ಊರಿನ ಜನತೆ ಹಾಗೂ ಕಾರ್ಮಿಕರು ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ.

ಕೆಂಪು ಕಲ್ಲು, ಮರಳು ಇಲ್ಲದ ಕಾರಣ ಮನೆ ಕಟ್ಟುವ ಜನರಿಗೆ, ರಸ್ತೆ ನಿರ್ಮಾಣದ ಕೆಲಸಗಾರರಿಗೆ, ಲಾರೀ ಚಾಲಕರಿಗೆ ಮತ್ತು ಗಣಿಗಾರಿಕೆಯಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ.
ಹೆಚ್ಚು ಖರ್ಚು, ಕಡಿಮೆ ಲಭ್ಯತೆ ಮತ್ತು ಲೈಸೆನ್ಸ್ ಸಮಸ್ಯೆಗಳ ನಡುವೆಲ್ಲಾ, ಸರಳ ಮನೆಯ ಕನಸು ನೋಡುತ್ತಿರುವ ಅವರ ಕುಟುಂಬಗಳು ದಿನದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಎದುರಿಸುತ್ತಿವೆ. ಮನೆ náಬಾಡಿಗೆಯ ಪಾವತಿ, ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಖರ್ಚುಗಳು ಎಲ್ಲವೂ ಪಾವತಿಸಲು ಸಾಧ್ಯವಾಗದೆ ಹಲವರು ಸಾಲದ ಚಕ್ರದಲ್ಲಿ ಸಿಲುಕುತ್ತಿದ್ದಾರೆ.ಮಿಡಲ್ ಕ್ಲಾಸ್ ಜನತೆ ವಿಪರೀತ ಹಿಂಸೆಗೆ ಒಳಗಾಗುತ್ತಿದ್ದಾರೆ.
ಈ ನಿಯಮಗಳಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ದುರ್ಬಲಗೊಂಡಿದ್ದು, ದಿನಗೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ನಡುವೆಯೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಮಹಮ್ಮದ್ ಅಸ್ಗರ್, ನ್ಯಾಯವಾದಿ
ಉಪಾಧ್ಯಕ್ಷರು – ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ.