
ಬೆಂಗಳೂರು : ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಮರಳು ಗಣಿಗಾರಿಕೆಯಿಂದ ಸಂಗ್ರಹವಾದ ರಾಜಧನ ಮೊತ್ತದಲ್ಲಿ ಶೇ.25 ರಷ್ಟನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಶೇ.25 ರಷ್ಟನ್ನು ಆಯಾ ತಾಲ್ಲೂಕಿನ ಉಳಿದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.


ಕೆ.ಎಂ.ಎಂ.ಸಿ(ತಿದ್ದುಪಡಿ) Karnataka Minor Mineral Concession ನಿಯಮಗಳು, 2016ರ ನಿಯಮ 31-ರ ಉಪ ನಿಯಮ (7) ರಂತೆ, ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನ ಮೊತ್ತದಲ್ಲಿ ಶೇ.25ರಷ್ಟು ಮೊತ್ತವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

ಮುಂದುವರೆದು, ದಿ:01.12.2021ರಂದು ಕೆ.ಎಂ.ಎಂ.ಸಿ(ತಿದ್ದುಪಡಿ) ನಿಯಮಗಳು, 2021ನ್ನು ಜಾರಿಗೊಳಿಸಲಾಗಿರುತ್ತದೆ. ಸದರಿ ತಿದ್ದುಪಡಿ ನಿಯಮ 31-R (13) ಹಾಗೂ ನಿಯಮ 31-ZA (3) ರಂತೆ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನದ ಮೊತ್ತದಲ್ಲಿ ಶೇ.25ರಷ್ಟನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಶೇ.25ರಷ್ಟು ಮೊತ್ತವನ್ನು ಆಯಾ ತಾಲ್ಲೂಕಿನ ಉಳಿದ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಆಯವ್ಯಯದ ಮೂಲಕ ಬಿಡುಗಡೆಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. KNN
2024-25ನೇ ಸಾಲಿನಲ್ಲಿ ಮರಳು ಗಣಿಗಾರಿಕೆಯಿಂದ ಸಂಗ್ರಹವಾಗಿರುವ ರಾಜಧನ ಮೊತ್ತದ ಶೇ.25ರಷ್ಟ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಹಾಗೂ ಶೇ.25ರಷ್ಟು ಮೊತ್ತವನ್ನು ಆಯಾ ತಾಲ್ಲೂಕಿನ ಉಳಿದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ ಸಂಬಂಧ ನಿರ್ದೇಶಕರು, ಗಣಿ ಭೂವಿಜ್ಞಾನ ಇಲಾಖೆರವರಿಂದ ಸ್ವೀಕೃತವಾಗಿರುವ ವರದಿಗಳನ್ವಯ ಒಟ್ಟಾರೆ ರೂ.305.42ಲಕ್ಷಗಳನ್ನು ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳಿಗೆ ಬಿಡುಗಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಗೆ ಸಂಬಂಧಿಸದಂತೆ ಸೂಕ್ತ ಕ್ರಮವಹಿಸಲು ಮೇಲೆ ಓದಲಾದ ಕಡತದಲ್ಲಿ ಕೋರಲಾಗಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, 2025-26ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ: 2515-00-198-1-10-3000 ರೂ.3000.00ಲಕ್ಷಗಳನ್ನು ಒದಗಿಸಿದ್ದು ಪ್ರಸ್ತಾಪಿಸಿರುವ ರೂ.305.42ಲಕ್ಷಗಳನ್ನು ಬಿಡುಗಡೆಗೊಳಿಸಲು ಈ ಕೆಳಗಿನಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದ ರೀತ್ಯ ರಾಜ್ಯದ ಜಿಲ್ಲೆಗಳ ಜಿಲ್ಲಾ ಪಂಚಾಯತ್ಗಳ ವ್ಯಾಪ್ತಿಯ ತಾಲ್ಲೂಕುಗಳ ಗ್ರಾಮ ಪಂಚಾಯತ್ಗಳಿಗೆ ಕಾರ್ಯಕ್ರಮದ ಲೆಕ್ಕಶೀರ್ಷಿಕೆ: 2515-00-198-1-10-300 ದಿನಾಂಕ:01.04.2024 ರಿಂದ 31.03.2025 ರವರೆಗೆ ಮರಳು ಗಣಿಗಾರಿಕೆಯಿಂದ ಸಂಗ್ರಹವಾಗಿರುವ ರಾಜಧನ ಮೊತ್ತದ ಶೇಕಡ 25%ರಷ್ಟನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳಿಗೆ ಹಾಗೂ ಶೇಕಡ 25%ರಷ್ಟನ್ನು ಆಯಾ ತಾಲ್ಲೂಕಿನ ಉಳಿದ ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ ಸಲುವಾಗಿ ಒಟ್ಟು ರೂ.305.42ಲಕ್ಷ (ರೂಪಾಯಿ ಮೂರು ನೂರ ಐದು ಲಕ್ಷದ ನಲವತ್ತೆರಡು ಸಾವಿರಗಳು ಮಾತ್ರ).
ಈ ರೀತಿ ಬಿಡುಗಡೆಗೊಳಿಸಿದ ಅನುದಾನವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ಗಳಿಗೆ ಅನುಬಂಧ-2ರಲ್ಲಿನ ಹಂಚಿಕೆಯನ್ವಯ ಬಿಲ್ಲನ್ನು ತಯಾರಿಸಿ ಖಜಾನೆಗೆ ಸಲ್ಲಿಸಿ ಸಂಬಂಧಪಟ್ಟ ಗ್ರಾಮ ಪಂಚಾಯತ್ಗಳಿಗೆ ವರ್ಗಾಯಿಸಿ ತೀರ್ಣಗೊಳಿಸಲು ಕ್ರಮವಹಿಸುವುದು.