August 25, 2025
WhatsApp Image 2025-07-31 at 9.26.13 AM

ನನ್ನ ಮದ್ವೆ ಆಗದಿದ್ರೆ ಫೋಟೋ ವೈರಲ್ ಮಾಡ್ತೇನೆ ಎಂದು ಯುವಕನ ಬ್ಲ್ಯಾಕ್ ಮೇಲ್ ಗೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ಒಂದು ಘಟನೆ ನಡೆದಿದೆ. ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಭಾವನ (22) ಆತ್ಮಹತ್ಯೆಗೆ ಶರಣಾಗಿರುವ ಯುವತಿ ಎಂದು ತಿಳಿದುಬಂದಿದೆ.

ಯುವಕ ನವೀನ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಭಾವನ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನವೀನ್ ಗೆ ಮದುವೆ ಆಗಿದ್ದರು ಕೂಡ ಭಾವನಾಗೆ ಆತ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಆತ್ಮಹತ್ಯೆಗೆ ಶರಣಾದ ಭಾವನ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ನಿವಾಸಿಯಾಗಿದ್ದಾಳೆ. ಮೈಸೂರಲ್ಲಿ ನರ್ಸಿಂಗ್ ಮಾಡುತ್ತಿದ್ದಾಗ ಭಾವನಾ ತಂದೇ ಹಣ ಕಳುಹಿಸುತ್ತಿದ್ದರು.

ನವೀನ್ ಗೆ ಮಗಳ ಮೊಬೈಲ್ ನಂಬರ್ ನೀಡಿ ಅವರ ತಂದೆ ಹಣ ಹಾಕಿಸುತ್ತಿದ್ದರು. ಗೂಗಲ್ ಪೇ ಫೋನ್ ಪೇ ಮೂಲಕ ಭಾವನಾತಂದೆ ನವೀನ್ ಮೂಲಕ ಹಣ ಹಾಕಿಸುತ್ತಿದ್ದರು. ನಂತರ ಭಾವನಾ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಮೊಬೈಲ್ ನಂಬರ್ ಇದ್ದಿದ್ದರಿಂದ ನವೀನ್ ಭಾವನಾ ಜೊತೆಗೆ ಸ್ನೇಹ ಬೆಳೆಸಿಕೊಂಡಿದ್ದ ಭಾವನಾಳನ್ನು ಈ ಹಿಂದೆ ನವೀನ್ ಧರ್ಮಸ್ಥಳಕ್ಕೂ ಕರೆದುಕೊಂಡು ಹೋಗಿದ್ದ. ಈ ವೇಳೆ ನವೀನ್ ಆಕೆ ಜೊತೆಗೆ ಫೋಟೋ ತೆಗೆಸಿಕೊಂಡಿದ್ದ. ನನ್ನನ್ನೇ ಮದುವೆ ಆಗಬೇಕು ಎಂದು ನವೀನ್ ಭಾವನಾಗೆ ಕಿರುಕುಳ ನೀಡಲು ಆರಂಭಿಸಿದ್ದ. ಕೆಲಸಕ್ಕೆ ತೆರಳುವಾಗ ನನ್ನ ಜೊತೆಗೆ ಬರಬೇಕು ಎಂದು ಕಿರುಕುಳ ನೀಡುತ್ತಿದ್ದ.

ಇಲ್ಲದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ನವೀನ್ ಕಿರುಕುಳದಿಂದ ಬೇಸತ್ತು 15 ದಿನಗಳ ಹಿಂದೆನೇ ಭಾವನ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾತೃ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಾವನ ಅದೃಷ್ಟವಶಾತ್ ಬದುಕು ಉಳಿದಿದ್ದಳು. ಈ ಸಂಬಂಧ ಭಾವನಾ ತಂದೆ ಚೇಳೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನು ಕರೆಸಿ, ಬುದ್ಧಿ ಮಾತು ಹೇಳಿ ಕಳಿಸಿದ್ದಾರೆ. ಕಳೆದ ಶನಿವಾರ ಭವನ ನೆಲಮಂಗಲದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ ನಿನ್ನೆ ಸಂಜೆ ಚಿಕ್ಕಮ್ಮನ ಮನೆಯಲ್ಲಿ ಭಾವನ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಕುರಿತು ನೆಲಮಂಗಲದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply