November 8, 2025
WhatsApp Image 2025-07-02 at 3.34.25 PM

 ಪತಿ ಕೊಲೆಗೈದು ಪ್ರಿಯಕರನ ಜೊತೆ ಸಂಸಾರ ಮಾಡುತ್ತಿದ್ದ ಪತ್ನಿಯನ್ನು ಅರೆಸ್ಟ್ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ರಿಂದ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ. ಕೇರಳದಲ್ಲಿ ಮೂವರು ಆರೋಪಿಗಳನ್ನು ಚನ್ನಗಿರಿ ಠಾಣೆ ಪೋಲಿಸರು ಇದೀಗ ಬಂಧಿಸಿದ್ದಾರೆ.ಪತಿ ಕೊಲೆಗೈದು, 18 ತಿಂಗಳು ಬಳಿಕ ನಿಂಗಪ್ಪ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪತ್ನಿ ಲಕ್ಷ್ಮಿ (38) ಪ್ರಿಯಕರ ತಿಪ್ಪೇಶ ನಾಯಕ (42) ಮತ್ತು ಕೊಲೆಗೆ ಸಹಾಯ ಮಾಡಿದ ಸಂತೋಷ (38) ಎನ್ನುವ ಆರೋಪಿಗಳನ್ನು ಇದೀಗ ಚನ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚೆನ್ನಗಿರಿ ತಾಲೂಕಿನ ಅಣಾಪುರ ಗ್ರಾಮದ ನಿವಾಸಿಯಾದ ಆರೋಪಿ ಲಕ್ಷ್ಮಿ, ಗ್ರಾಮದ ನಿಂಗಪ್ಪನ ಜೊತೆಗೆ ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ನಿಂಗಪ್ಪನ ಜೊತೆಗೆ ವಿವಾಹವಾದ ಬಳಿಕ ಲಕ್ಷ್ಮಿಗೆ ಮಕ್ಕಳಾಗಿರಲಿಲ್ಲ.

ಶೃಂಗಾರ ಬಾಗ ತಂಡ ನಿವಾಸಿ ತಿಪ್ಪೇಶ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದಳು. ಪತ್ನಿ ಗರ್ಭಿಣಿಯಾಗಿದ್ದಕ್ಕೆ ಪತಿ ನಿಂಗಪ್ಪ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ್ದ. ಈ ಕಾರಣಕ್ಕೆ ನಿಂಗಪ್ಪ ಪತ್ನಿ ಲಕ್ಷ್ಮಿ ಹೊಟ್ಟೆಗೆ ಕಾಲಿನಿಂದ ಒದ್ದಿದ್ದ. ಪತಿ ಕಾಲಿನಿಂದ ಒದ್ದಿದ್ದಕ್ಕೆ ಲಕ್ಷ್ಮಿ ಗರ್ಭಪಾತ ಮಾಡಿಸಿಕೊಂಡಿದ್ದಳು. ಬಳಿಕ ಪ್ರಿಯಕರನ ಜೊತೆಗೆ ಸೇರಿ ಪತಿ ನಿಂಗಪ್ಪನನ್ನು ಪತ್ನಿ ಕೊಲೆ ಮಾಡಿದ್ದಾಳೆ. ಈಗ ಚನ್ನಾಗಿರಿ ಪೊಲೀಸರು ಕೇರಳದಲ್ಲಿದ್ದಂತಹ ಪತ್ನಿ ಸೇರಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ ಘಟನೆ ಕುರಿತು ಚೆನ್ನಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply