November 8, 2025
WhatsApp Image 2025-08-15 at 11.01.52 AM

ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಲಾಭ ಸಿಗುತ್ತೆ ಅಂದುಕೊಂಡಿದ್ದಾರೆ ಆದರೆ ಸಿಗಲ್ಲ ಎಂದು ಬಿಜೆಪಿ ಧರ್ಮಸ್ಥಳ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ಧರ್ಮಸ್ಥಳದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಹಿಂದೂ ಅಂದರೆ ಅಪಪ್ರಚಾರ ಮಾಡುವುದಲ್ಲ. ಸುಳ್ಳು ಹೇಳೋದಲ್ಲ. ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಮಾಡಿದವರು ಯಾರು? ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ಏನಾದರೂ ಬರುತ್ತದ? ಬಾನು ಮುಷ್ತಾಕ್ ಉದ್ಘಾಟನೆ ಮಾಡಿಸುತ್ತಿದ್ದೇವೆ. ದಸರಾ ನಾಡ ಹಬ್ಬ ಅಲ್ವಾ? ಹಿಂದೂ ಮುಸಲ್ಮಾನರು ಕ್ರಿಶ್ಚಿಯನ್ ಯಲ್ಲರು ಸೇರಿ ಎಲ್ಲರೂ ಆಚರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.

About The Author

Leave a Reply