October 13, 2025
WhatsApp Image 2025-09-03 at 9.16.24 AM

ಮಂಗಳೂರು: ಪ್ರಯಾಣಿಕರೊಬ್ಬರ ಬ್ಯಾಗ್ ನಿಂದ ಚಿನ್ನಾಭರಣ ಕದ್ದಂತ ಆರೋಪದಡಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸಿಬ್ಬಂದಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಸ್ಟ್.30ರಂದು ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರು ಪ್ರಯಾಣಿಸಿದ್ದರು. ತಮ್ಮ ಲಗೇಜ್ ಬ್ಯಾಗ್ ಅನ್ನು ಚೆಕ್-ಇನ್ ಗೆ ಹಾಕಿದ್ದರು. ಅದರಲ್ಲಿ ಸುಮಾರು 4.5 ಲಕ್ಷ ಮೌಲ್ಯದ 56 ಗ್ರಾಂ ಆಭರಣಗಳನ್ನು ಇರಿಸಲಾಗಿತ್ತು. ಇವು ಕಾಣೆಯಾಗಿದ್ದಾವೆ ಎಂಬುದಾಗಿ ಬಜ್ಪೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು.

ಈ ದೂರು ಆಧರಿಸಿ ತನಿಖೆಯನ್ನು ಬಜ್ಪೆ ಠಾಣೆಯ ಪೊಲೀಸರು ಕೈಗೊಂಡಿದ್ದರು. ತನಿಖೆಯ ವೇಳೆ ಅನುಮಾನ ಬಂದ ಹಿನ್ನಲೆಯಲ್ಲಿ ಕಂದವಾರ ನಿವಾಸಿ ನಿತಿನ್, ಮೂಡಪೆರಾರ ನಿವಾಸಿಯಾಗಿದ್ದಂತ ಸದಾನಂದ, ರಾಜೇಶ್ ಹಾಗೂ ಬಜ್ಪೆ ನಿವಾಸಿ ಪ್ರವೀಣ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.

ಪೊಲೀಸರ ವರಸೆಯಲ್ಲಿ ವಿಚಾರಣೆ ನಡೆಸಿದಂತ ವೇಳೆಯಲ್ಲಿ ಏರ್ ಇಂಡಿಯಾ SATS ನಲ್ಲಿ ಲೋಡರ್ ಗಳಾಗಿ ಕೆಲಸ ಮಾಡುತ್ತಿದ್ದಂತ ನಾಲ್ವರು ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕದ್ದಿರೋದನ್ನು ತಪ್ಪೊಪ್ಪಿಕೊಂಡಿದ್ದರು. ಅಲ್ಲದೇ ಅವುಗಳನ್ನು ರವಿರಾಜ್ ಎಂಬುವರಿಗೆ ಮಾರಾಟ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ರವಿರಾಜ್ ಬಳಿಯಿಂದ 5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕದ್ದ ಚಿನ್ನ ಪಡೆದಂತ ಆರೋಪದಡಿ ಅವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ.

About The Author

Leave a Reply