October 13, 2025
WhatsApp Image 2025-09-03 at 3.25.46 PM

ಕೊಲ್ಲೂರು : ಕೇರಳದ 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕನನ್ನು ಕೊಲ್ಲೂರಿಗೆ ಕರೆದುಕೊಂಡು ಬಂದು ವಸತಿಗೃಹದಲ್ಲಿ ಆತನ ಜತೆಗೆ ತಂಗಿದ್ದ ಮಹಿಳೆಯನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಚೇರ್ತಲ ನಿವಾಸಿ 27ರ ಹರೆಯದ ವಿವಾಹಿತ ಮಹಿಳೆ ಸನೂಷ ಎಂಬಾಕೆಯು ಲೈಂಗಿಕ ತೃಷೆಯಿಂದ 17 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಹೋಗಿದ್ದಾಳೆ ಎಂಬ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಮಹಿಳೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಎರಡು ದಿನಗಳ ಹಿಂದೆ ಆಕೆ ಮತ್ತು ಬಾಲಕ ನಾಪತ್ತೆಯಾಗಿದ್ದರು.ಬಾಲಕನ ಮನೆಯವರು ಹಾಗೂ ಯುವತಿಯ ಮನೆಯವರು ನಾಪತ್ತೆ ದೂರು ನೀಡಿದ್ದರು.

ಕೊಲ್ಲೂರಿಗೆ ಪ್ರಯಾಣಿಸುತ್ತಿರುವಾಗ ಎಲ್ಲಿಯೂ ಅವರು ತಮ್ಮ ಮೊಬೈಲ್ ಫೋನು ಬಳಸಿರದ ಕಾರಣ ಪೊಲೀಸರಿಗೆ ಅವರ ಸುಳಿವು ಪತ್ತೆ ಹಚ್ಚಲು ತಡವಾಗಿತ್ತು. ಕೊಲ್ಲೂರು ತಲುಪಿದ ಬಳಿಕ ಮಹಿಳೆಯು ತನ್ನ ಫೋನಿನಿಂದ ಗೆಳತಿಗೆ ಸಂದೇಶ ಕಳುಹಿಸಿದ್ದು, ಈ ಸುಳಿವಿನ ಆಧಾರದಲ್ಲಿ ಕೊಲ್ಲೂರು ವಸತಿಗೃಹದಲ್ಲಿ ಪೊಲೀಸರು ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧನ ಮಹಿಳೆಗೆ ನ್ಯಾಯಾಂಗ ವಿಧಿಸಲಾಗಿದ್ದು ಆಕೆಯನ್ನು ಕೊಟ್ಟಾರಕ್ಕರ ಜೈಲಿಗೂ ಬಾಲಕನನ್ನು ಹೆತ್ತವರ ಜೊತೆ ಕಳುಹಿಸಿಕೊಡಲಾಗಿದೆ.

About The Author

Leave a Reply