October 13, 2025
WhatsApp Image 2025-09-04 at 10.14.49 AM

ಸುಳ್ಯ: ಕಾರು ಮತ್ತು ಟ್ಯಾಂಕರ್ ನಡುವೆ ಭೀ*ಕರ ಅಪ*ಘಾತ ಸಂಭವಿಸಿ ಮಹಿಳೆಯೋರ್ವರು ಮೃ*ತಪಟ್ಟು, ಇಬ್ಬರು ಗಂ*ಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪ ಕಡೆಪಾಲ ಎಂಬಲ್ಲಿ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಟ್ಯಾಂಕರ್ ಹಾಗೂ ಸುಳ್ಯದಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಮಧ್ಯೆ ಅಪ*ಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಮಹಿಳೆ ಕೊಡಗಿನ ಸಿದ್ದಾಪುರದ ನೆಲ್ಲಿಹುದುಕೇರಿ ನಿವಾಸಿ ಶೋಭಾ. ಪಿ.(47) ಗಂ*ಭೀರ ಗಾ*ಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃ*ತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಕಿ ಕಾಣಿಸಿಕೊಂಡು ಸ್ಪೋಟಗೊಂಡ ವಾಷಿಂಗ್ ಮೆಶಿನ್; ಅಪಾರ್ಟ್ ಮೆಂಟ್‌ ನಲ್ಲಿದ್ದ ಮಹಿಳೆ ಅಪಾಯದಿಂದ ಪಾರು ಸುಳ್ಯದ ಅರಂಬೂರು ಎಂಬಲ್ಲಿ ತನ್ನ ಸಂಬಂಧಿಕರ ಆರೋಗ್ಯ ವಿಚಾರಿಸಲು ತೆರಳಿ ಹಿಂದಿರುಗುತ್ತಿದ್ದ ವೇಳೆ ಅಪ*ಘಾತ ನಡೆದಿದೆ. ಕಾರಿನ ಚಾಲಕ ದೇವಯ್ಯ(48) ಹಾಗೂ ವನಜಾಕ್ಷಿ ( 45) ಅವರು ಗಂ*ಭೀರ ಗಾ*ಯಗೊಂಡಿದ್ದು, ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply