

ಮಂಗಳೂರು: ಈದ್ ಮಿಲಾದ್ ದಿವಸ ನಡೆಯುವ ಜಾಥಾದಲ್ಲಿ ದ್ವಿಚಕ್ರವಾಹನ ಚಾಲನೆಗೆ ಅನುಮತಿಯಿಲ್ಲ, ಮತ್ತು ಸಂಚಾರಿ ನಿಯಮ ಉಲ್ಲಂಘನೆ ಕೂಡದು, ಎಂದು ಜಿಲ್ಲಾಡಳಿತ ಮತ್ತು ಪೊಲೀಸು ಇಲಾಖೆ ಸಭೆಯಲ್ಲಿ ಹಾಜರಾದ ಕೆ.ಅಶ್ರಫ್ ಅವರು ಮಾಹಿತಿ ನೀಡಿದ್ದಾರೆ.
ನಾಳೆ ಈದ್ ಮಿಲಾದ್ ಪ್ರಯುಕ್ತ ಜಿಲ್ಲೆಯಲ್ಲಿ ನಡೆಯುವ ಜಾಥಾದಲ್ಲಿ ದ್ವಿಚಕ್ರ ವಾಹನ ಸವಾರಿಗೆ ಅನುಮತಿ ಇಲ್ಲ ಮತ್ತು ಸಂಚಾರಿ ನಿಯಮವನ್ನು ಪಾಲಿಸಬೇಕಾಗಿ ಮನವಿ ಮಾಡಲಾಗಿದೆ.
ನಗರದಲ್ಲಿ ನಾಳೆ ಮಿಲಾದ್ ಪ್ರಯುಕ್ತ ಬಂದರ್ ಜುಮ್ಮಾ ಮಸೀದಿಯಿಂದ ಈದ್ಗಾ ವರೆಗಿನ ಕಾಲ್ನಡಿಗೆ ಜಾಥಾದಲ್ಲಿ ಯಾವುದೇ ದ್ವಿಚಕ್ರ ವಾಹನ ಬಳಕೆಗೆ ಅವಕಾಶವಿಲ್ಲ ಮತ್ತು ಸಂಚಾರಿ ನಿಯಮ ಪಾಲನೆಗೆ ಕೋರಲಾಗಿದೆ. ಜಿಲ್ಲೆಯ ಮಸೀದಿಗಳಲ್ಲಿ ಈ ಬಗ್ಗೆ ಸಾರ್ವಜನಿಕ ಮಾಹಿತಿ ನೀಡುವಂತೆ ಕೋರಲಾಗಿದೆ. ಮಂಗಳೂರು ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಯುವ
ಲೋಕ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ತಾ: 05-09-2025ರ ಶುಕ್ರವಾರ ಸಂಜೆ 00.04 ಗಂಟೆಗೆ ಕುದ್ರೋಳಿ ನಡುಪಳ್ಳಿಯಿಂದ ಬಂದರು ಜುಮಾ ಮಸೀದಿಯಾಗಿ ಬಾವುಟಗುಡ್ಡೆ ಈದ್ಗಾ ಮಸೀದಿಯವರೆಗೆ ಸಾರ್ವಜನಿಕ ಮೀಲಾದ್ ರ್ಯಾಲಿ ಜರಗಲಿದು
ಮೆರವಣಿಗೆ ಅಚ್ಚುಕಟ್ಟಾಗಿರಬೇಕು,
ಮೆರವಣಿಗೆಯಲ್ಲಿ ಸ್ವಲಾತ್ ಅಲ್ಲದೆ ಬೇರೆ ಯಾವುದಕ್ಕೂ ಅವಕಾಶವಿಲ್ಲ.ಯಾವುದೇ ಬೇಡದ ವಸ್ತುಗಳನ್ನು ಧರಿಸಬಾರದು,ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ,ತೊಂದರೆಯಾಗದಂತೆ ನೋಡಿಕೊಳ್ಳಬೇಕು,
ಮೆರವಣಿಗೆಯಲ್ಲಿ ಯಾವುದೇ ವಾಹನದಲ್ಲಿ ಧ್ವನಿವರ್ಧಕವನ್ನು ಉಪಯೋಗಿಸಲು ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ. ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.