

ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ (CLUB ಸಂಖ್ಯೆ 223058)ವತಿಯಿಂದ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಅಧ್ಯಕ್ಷರಾದ ದಿವಾಕರ ಶೆಟ್ಟಿ, ಝೋನ್ 4 ಅಸಿಸ್ಟೆಂಟ್ ಗವರ್ನರ್ ಶ್ರೀ.ಪದ್ಮನಾಭ ರೈ ಕಲ್ಲಡ್ಕ, ಶಾರ್ಜೆಂಟ್ ಆರ್ಮ್ಸ್ ಸುಂದರ್ ಬಂಗೇರ ನೇತೃತ್ವದಲ್ಲಿ ಸೂಚನ ಫಲಕ ಅಳವಡಿಕೆ ಕಾರ್ಯಕ್ರಮ ನಡೆಯಿತು..

ಕಲ್ಲಡ್ಕ ಮಂಚಿ ರಾಜ ರಸ್ತೆಯ ಮದ್ಯಬಾಗದಲ್ಲಿ ಬರುವ ಕೊಕ್ಕಪುಣಿ ಸಮೀಪದ ದಂಡೆಮಾರ್ ಒಳರಸ್ತೆ ಬಹುದೊಡ್ಡ ಜನವಸತಿ ಪ್ರದೇಶವಾಗಿ ಮಾರ್ಪಾಡಾಗಿದ್ದಲ್ಲದೆ,ಹಲವಾರು ಅಡ್ಡರಸ್ತೆಗಳನ್ನು (pocket road) ಹೊಂದಿದ್ದು,ಒಳರಸ್ತೆಯಲ್ಲಿ ಬರುವ,ಮಸೀದಿ,ಮಂದಿರ,ಶಾಲೆಗಳಿಗೆ ಪರ ಊರಿನಿಂದ ಬರುವವರು,ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬರುವವರಿಗೆ ದಾರಿಯ ಬಗ್ಗೆ ವಿಚಾರಿಸಿಕೊಂಡು ಬರುವ ಪರಿಸ್ಥಿತಿ.ಅಲ್ಲದೆ ಸರಕಾರಿ ಅಧಿಕಾರಿಗಳೂ ಶಾಲಾ ಬೇಟಿಗಳಿಗೆ ಕಷ್ಟವಾಗುತ್ತಿದದ್ದನ್ನು ಮತ್ತು ಸರಿಯಾದ ಸೂಚನ ಪಲಕದ ಅಗತ್ಯತೆಯನ್ನು ಮನಗಂಡು ಸಾಮಾಜಿಕ ಕಾರ್ಯಕರ್ತರಾದ ಹಸೈನಾರ್ ತಾಳಿತ್ತನೂಜಿಯವರು ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಯವರಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿದಾಗ ಸ್ಥಳ ಪರಿಶೀಲನೆ ನಡೆಸಿ ಬೊಳಂತೂರು ದಂಡೆಮಾರ್ ಬಳಿ,ತಾಳಿತ್ತನೂಜಿ ನಾರ್ಶ ತಿರುಗುವ ಬಳಿ,ತಾಳಿತ್ತನೂಜಿ ದೇವಸ್ಯ ಬಸ್ಸು ತಂಗುದಾನದ ಬಳಿ,ತಾಳಿತ್ತನೂಜಿ ಗಾಣದಮೂಲೆಗೆ ತಿರುಗುವ ಶಾಲಾ ಬಳಿ ಉತ್ತಮ ಗುಣಮಟ್ಟದ ಸೂಚನ ಪಲಕವನ್ನು ಅಳವಡಿಸಿ ಸಾರ್ವಜನಿಕರ ಮತ್ತು ಪ್ರಯಾಣಿಕರ ಅನುಕೂಲತೆಗೆ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ.ರೋಟರಿ ಕ್ಲಬ್ ಅದ್ಯಕ್ಷರು/ಕಾರ್ಯದರ್ಶಿಗಳು/ ಪಧಾದಿಕಾರಿಗಳು/ ಸದಸ್ಯರಿಗೆ ನಾಗರೀಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು..
ಸೂಚನ ಪಲಕ ಅಳವಡಿಸುವ ಸಂಧರ್ಭದಲ್ಲಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಅದ್ಯಕ್ಷರಾದ ರೊ| ದಿವಾಕರ ಶೆಟ್ಟಿ,ರೊಟರಿ ಕ್ಲಬ್ ನಿಕಟಪೂರ್ವ ಅದ್ಯಕ್ಷರೂ,ಮಾಜಿ ತಾಲೂಕು ಪಂಚಾಯತ್ ಅದ್ಯಕ್ಷರಾದ ಶ್ರೀ. ಪದ್ಮನಾಭ ರೈ ಕಲ್ಲಡ್ಕ,ರೊ| ಸುಂದರ್ ಬಂಗೇರ,ಇಂಟರ್ಯಾಕ್ಟ್ ಕ್ಲಬ್ ಅದ್ಯಕ್ಷರಾದ ಸಝ ಪಾತಿಮ,ಬೊಳಂತೂರು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಯಾಕೂಬ್ ದಂಡೆಮಾರ್,ಕೊಳ್ನಾಡು ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ,ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸದಸ್ಯರಾದ ಹಸೈನಾರ್ ತಾಳಿತ್ತನೂಜಿ,ಸ್ಥಳೀಯರಾದ ಇಬ್ರಾಹಿಂ ಹಾಜಿ,ಮದುಕರ ಶೆಟ್ಟಿ ಸಹಿತ ಇನ್ನಿತರರು ಉಪಸ್ಥಿತಿತರಿದ್ದರು.