October 13, 2025
WhatsApp Image 2025-09-06 at 9.07.24 AM


ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮ ಸಡಗರದಿಂದ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ 1500 ಜನ್ಮದಿನ ( ಈದ್ ಮೀಲಾದ್) ಆಚರಿಸಲಾಯಿತು.ಈ ಕಾರ್ಯಕ್ರಮ ದಲ್ಲಿ ಮಸೀದಿಯ ಅದ್ಯಕ್ಷರಾದ ಜನಾಬ್: ಸಲೀಮ್ ಕೊಲ್ಲಹಳ್ಳಿ ರವರು ದ್ವಜರೋಹಣಗೈದರು, ಈ ಕಾರ್ಯಕ್ರಮದಲ್ಲಿ ನೂತನ ಮಸೀದಿಯ ಮೀನಾರದ ಖರ್ಚು ವೆಚ್ಚ ಸರಿ ಸುಮಾರು ಹತ್ತು ಲಕ್ಷ ರೂಪಾಯಿ ನೀಡಿದ ದಾನಿಗಳಾದ IBC ಅಬ್ಬಾಸ್ ರವರನ್ನು ಸನ್ಮಾನಿಸಲಾಯಿತು.


ನಂತರ ಮಸೀದಿಯ ಗುರುಗಳಾದ ಜನಾಬ್ ಬದ್ರುದ್ದಿನ್ ದಾರಿಮೀ ರವರ ನೇತೃತ್ವದಲ್ಲಿ ಮೀಲಾದ್ ಮೆರವಣಿಗೆ ನಡೆಯಿತು.
ಈ ಮೆರವಣಿಗೆಯಲ್ಲಿ ಸ್ಥಳೀಯ ಮದರಸ ವಿದ್ಯಾರ್ಥಿಗಳು ಜಮಾಹತ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಜಮಾಹತ್ ಸಮಿತಿಯು ಅಧೀನದಲ್ಲಿರುವ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯರು ಕಿರಿಯರು ಯವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು
ಈ ಮೆರವಣಿಗೆಯಲ್ಲಿ ಸ್ಥಳೀಯ ಮದರಸ ವಿದ್ಯಾರ್ಥಿಗಳ ದಫ್ ಕಾರ್ಯಕ್ರಮವು ಅಕರ್ಷಣಿಯವಾಗಿತ್ತು
ಸಹೋದರರಾದ ನಾವೆಲ್ಲರೂ ಪ್ರವಾದಿ ಮಹಮದ್ ಮುಸ್ತಫಾ(ಸ ಅ)ರವರ ತತ್ವ ಆದರ್ಶಗಳನ್ನು ಪಾಲಿಸೋಣವೆಂದು ಜಮಾಹತ್ ಸಮಿತಿಯು ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಸಲೀಮ್ ಕೊಲ್ಲಹಳ್ಳಿರವರು ತಮ್ಮ ಈದ್ ಮೀಲಾದ್ ಸಂದೇಶದಲ್ಲಿ ನುಡಿದರು. ಸದರ್ ಉಸ್ತಾದ್ ಸ್ವಾದೀಕ್ ಹನೀಫಿ ಅಲ್ ಅಶ್ ಅರಿ ರವರು ಸ್ವಾಗತಿಸಿ, ಕಾರ್ಯನಿರ್ವಾಹಣೆಗೈದರು
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ

About The Author

Leave a Reply