October 12, 2025
WhatsApp Image 2025-09-07 at 9.27.25 AM

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ಬುರುಡೆ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ. ವಿಚಾರಣೆಯ ವೇಳೆ ಮಾಸ್ಕ್ ಮ್ಯಾನ್ ಚಿನ್ನಯ ಎಸ್ ಐ ಟಿ ಅಧಿಕಾರಿಗಳ ಮುಂದೆ ಎಲ್ಲಾ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಹೀಗಾಗಿ ಈ ಒಂದು ಬುರುಡೆ ಪ್ರಕರಣ ಶೀಘ್ರದಲ್ಲಿ ತಾರ್ಕಿಕ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಸ್ ಐ ಟಿ ಅಧಿಕಾರಿಗಳು ಕೊನೆಗೂ ಬುರುಡೆ ಪ್ರಕರಣವನ್ನು ಭೇದಿಸಿದ್ದಾರೆ ಸೌಜನ್ಯ ಮಾವ ವಿಠಲ ಗೌಡನಿಂದಲೇ ಚಿನ್ನಯ್ಯ ಕಥೆಯನ್ನು ಶುರು ಮಾಡಿದ್ದ. ವಿಚಾರಣೆಯ ವೇಳೆ ಚಿನ್ನ ಯ್ಯ ಎಲ್ಲಾ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ಚಿನ್ನಯ ಉಜಿರೆಗೆ ವಾಪಸ್ ಬಂದಿದ್ದ. ಉಜಿರೆಯ ಗ್ರಾಮ ಪಂಚಾಯಿತಿನಲ್ಲಿ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದ.

ಸೌಜನ್ಯ ಮಾವ ವಿಠಲ ಗೌಡನ ಆರೋಪಿ ಚಿನಯ್ಯ ಇದೇ ವೇಳೆ ಕಣ್ಣಿಗೆ ಬಿದ್ದಿದ್ದಾನೆ. ವಿಠಲ ಗೌಡನಿಗೆ ಚೆನ್ನಯ್ಯನ ಮೊದಲೇ ಪರಿಚಯವಿತ್ತು. ಕಾನೂನು ಪ್ರಕ್ರಿಯೆಗೆ ಒಳಪಟ್ಟ ಚಿನ್ನಯ್ಯ ಆರೋಪಿ ಚಿನಯ್ಯನನ್ನು ವಿಠಲ ಗೌಡ ಗ್ಯಾಂಗ್ ಗೆ ಪರಿಚಯಿಸಿದ್ದ. ಗ್ಯಾಂಗ್ ಜೊತೆ ಸೇರಿ ಜಂಟಿಯಾಗಿ ಷಡ್ಯಂತ್ರದ ಪ್ಲಾನ್ ಮಾಡಲಾಗಿತ್ತು. ವಿಠಲ ಗೌಡನ ಜೊತೆಗೆ ಬುರುಡೆ ತರಲು ಮತ್ತೋರ್ವ ವ್ಯಕ್ತಿ ಹೋಗಿದ್ದ ಎನ್ನಲಾಗಿದೆ. ವಿಠಲ ಗೌಡನ ಜೊತೆಗೆ ಡ್ರೈವಿಂಗ್ ಮಾಡಿಕೊಂಡು ಪ್ರದೀಪ್ ಗೌಡ ಎನ್ನುವ ವ್ಯಕ್ತಿ ಹೋಗಿದ್ದ ನಿನ್ನೆ ವಿಠಲ ಗೌಡ ಹಾಗೂ ಪ್ರದೀಪ್ ಗೌಡನನ್ನು ಕರೆದೋಯ್ದು ಸ್ಥಳ ಮಹಜರು ಮಾಡಲಾಗಿದೆ.

About The Author

Leave a Reply