November 8, 2025
WhatsApp Image 2025-09-14 at 1.01.00 PM

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ತನ್ನ ಮಕ್ಕಳನ್ನು ಬಕೆಟ್​ನಲ್ಲಿ ಮುಳುಗಿಸಿ ಕೊಂದು ಬಳಿಕ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಪತ್ನಿ ಬಚಾವ್​ ಆಗಿದ್ದಾರೆ. ಹೊಸಕೋಟೆ ಪೊಲೀಸರ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವು ಎಂದು ಗುರುತಿಸಲಾಗಿದೆ. ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಪ್ರೀತಿ ಮಾಡಿದ್ದು, ಅನ್ಯ ಜಾತಿಯಾಗಿದ್ದ ಕಾರಣ ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು. ಮದುವೆ ನಂತರ ಚೆನ್ನಾಗಿದ್ದ ಕುಟುಂಬಕ್ಕೆ ಅಪಘಾತದ ಬರೆ ಬಿದ್ದಿತ್ತು.
ರಸ್ತೆ ಅಪಘಾತದಲ್ಲಿ ಶಿವು ಕಾಲು ಮುರಿದುಕೊಂಡು ಆಸ್ವತ್ರೆ ಪಾಲಾಗಿದ್ದ. ಎರಡು ಮನೆಯವರ ಸಹಕಾರವಿಲ್ಲದ ಕುಟುಂಬ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು.

ಮನೆ ನಿರ್ವಹಣೆಗೆ ಮಹಿಳೆ ಕೆಲಸಕ್ಕೆ ಹೋಗ್ತಿದ್ರೆ, ಗಂಡ ಮನೆಯಲ್ಲೆ ಇರ್ತಿದ್ದ. ಇತ್ತೀಚೆಗೆ ಪತ್ನಿ ಶೀಲದ ಮೇಲೂ ಶಿವು ಅನುಮಾನ ಪಡುತ್ತಿದ್ದ. ಹಾಗಾಗಿ ಶನಿವಾರ ತಿಂಡಿ ತರಲು ಮಂಜುಳಾ ನನ್ನು ರಾತ್ರಿ ಅಂಗಡಿಗೆ ಕಳಿಸಿದ್ದ ಶಿವು, ಈ ವೇಳೆ ಮಕ್ಕಳಿಬ್ಬರಿಗೂ ವೇಲ್​ನಿಂದ ಕುತ್ತಿಗೆ ಬಿಗಿದಿದ್ದ. ಆದರೆ ವೇಲ್​​ನಿಂದ ಸಂಪೂರ್ಣ ಜೀವ ಹೋಗದ ಕಾರಣ ಮತ್ತೆ ಇಬ್ಬರನ್ನು ಬಕೆಟ್​ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ. ಮಕ್ಕಳಿಬ್ಬರ ಸಾವು ಖಚಿತ ಮಾಡಿಕೊಂಡು ಬಳಿಕ ಶಿವು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

About The Author

Leave a Reply