November 8, 2025
WhatsApp Image 2025-09-17 at 3.26.11 PM

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್ಐಟಿ ಶೋಧ ಕಾರ್ಯ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅಸ್ತಿಪಂಜರಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಎಸ್ಐಟಿ ಅಧಿಕಾರಿಗಳು ಬುಧವಾರ ಬಂಗ್ಲೆಗುಡ್ಡದಲ್ಲಿ ಪರಿಶೀಲನೆ ಆರಂಭಿಸಿದ್ದು, ಈ ಹಿಂದೆ ಸಾಕ್ಷಿ ದೂರುದಾರ ಗುರುತಿಸಿದ 11ನೇ ಸ್ಥಳದ ಸಮೀಪವೇ ಅಸ್ತಿ ಪಂಜರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಪತ್ತೆಯಾಗಿರುವ ಮೂಳೆಗಳನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದು ‘ಸ್ಥಳ ಮಹಜರು ನಡೆಸಲು ನನ್ನನ್ನು ಕರೆದೊಯ್ದ ವೇಳೆ ಹಲವಾರು ಮೃತದೇಹಗಳ ಅವಶೇಷಗಳು ಕಂಡುಬಂದಿವೆ’ ಎಂದು ಸೌಜನ್ಯಾಳ ಮಾವ ವಿಠಲ ಗೌಡ ಹೇಳಿದ್ದ ಸ್ಥಳವೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಅರಣ್ಯದ ಒಳಭಾಗದಲ್ಲೂ ಎಸ್.ಐ.ಟಿ ಶೋಧ ಕಾರ್ಯ ಮುಂದುವರಿಸಿದ್ದು, ಏನೆಲ್ಲ ಪತ್ತೆಯಾಗಿವೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.

About The Author

Leave a Reply