November 8, 2025
WhatsApp Image 2025-09-19 at 5.17.46 PM

 ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ತಂದೆಯ ಮೇಲಿನ ಸೇಡಿಗಾಗಿ ಅವರ ಮಗಳನ್ನೇ ಪಾಪಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲಬುರ್ಗಿಯಲ್ಲಿ ಓರ್ವ ಯುವಕನ ಆತ್ಮಹತ್ಯೆಗೆ ಪ್ರತೀಕಾರವಾಗಿ ಏನನ್ನು ಅರಿಯದಂತ ಜೀವನದಲ್ಲಿ ಬಾಳಿ ಬದುಕಬೇಕಾಗಿದ್ದಂತ ಯುವತಿಯನ್ನು ಯುವಕನೊಬ್ಬ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಕಬ್ಬಿಣದ ರಾಡ್ ನಿಂದ ಯುವತಿ ಭಾಗ್ಯಶ್ರೀ ಸುಲಹಳ್ಳಿ ತಲೆಗೆ ಹೊಡೆದು ಬರ್ಬರವಾಗಿ ಮಂಜುನಾಥ್ ಎಂಬಾತ ಕೊಲೆಗೈದಿದ್ದಾನೆ.

ಕಳೆದ ಸೆ.11ರಂದು ಭಾಗ್ಯಶ್ರೀ ಹಾಗೂ ಅಕ್ಕ ಜೊತೆಗೆ ವಾಕಿಂಗ್ ತೆರಳಿದ್ದರು. ಕಿರಾಣಿ ಅಂಗಡಿಯಲ್ಲಿ ದಿನಸಿ ತೆಗೆದುಕೊಂಡು ಬರುವಷ್ಟರಲ್ಲಿ ಭಾಗ್ಯಶ್ರೀ ನಾಪತ್ತೆಯಾಗಿದ್ದಳು. ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಆದರೇ ಇಂದು ಬೆಳಗ್ಗೆ ಮಳಖೇಡ ಸಿಮೆಂಟ್ ಕಾರ್ಖಾನೆ ಪಕ್ಕದಲ್ಲಿನ ನಾಲೆಯಲ್ಲಿ ಭಾಗ್ಯಶ್ರೀ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ. ಈ ಸಂಬಂಧ ಆರೋಪಿ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಮೆಂಟ್ ಕಾರ್ಖಾನೆಯಲ್ಲಿ ವಿನೋದ್ ಯೂನಿಯನ್ ಲೀಡರ್ ಆಗಿದ್ದನು. ಖಾಯಂ ಆಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಭಾಗ್ಯಶ್ರೀ ತಂದೆ ವಿನೋದ್ ಗೆ ನೌಕರಿ ಖಾಯಂ ಆಗದೇ ಇರುವುದಕ್ಕೆ ಕಾರಣ ಎಂಬುದಾಗಿ ಸ್ನೇಹಿತನಾಗಿದ್ದಂತ ಮಂಜುನಾಥ್ ಎಂಬಾತ ಭಾಗ್ಯಶ್ರೀಯನ್ನು ತಂದೆ ಮೇಲಿನ ಸಿಟ್ಟಿನಿಂದ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿರದಾಗಿ ಹೇಳಲಾಗುತ್ತಿದೆ.

About The Author

Leave a Reply