

ಈಜಲು ತೆರಳಿದ ಆರು ಮಂದಿ ವಿದ್ಯಾರ್ಥಿಗಳ ಪೈಕಿ ಓರ್ವ ನೀರುಪಾಲದ ಘಟನೆ ಉಡುಪಿಯ ಮಟ್ಟು ಬೀಚ್ನಲ್ಲಿ ನಡೆದಿದೆ.
ಮಣಿಪಾಲ ಕಾಲೇಜೊಂದರ ವಿದ್ಯಾರ್ಥಿ ವೀರೂರುಲ್ಕರ್(18) ಮೃತ ವಿದ್ಯಾರ್ಥಿ. ಮೃತ್ಯುಂಜಯ (18),ಅತುಲ್ಯ ಅಶ್ವನಿ ಶ್ರೀವಾಸ್ತವ (18),ಸಾಕ್ಷಾಮ್ ರೇ (18), ಪ್ರಭಾವ ಮಿಶ್ರ (18),ಕೃಷ್ಣವ (18) ಎಂಬವರನ್ನು ರಕ್ಷಿಸಲಾಗಿದೆ. 6 ಜನ ಸೇರಿ ಮಟ್ಟು ಬೀಚ್ ಗೆ ಈಜಲು ಬಂದಿದ್ದರು. ಈ ವೇಳೆ ಸ್ಥಳೀಯರು ಈಜದಂತೆ ಎಚ್ಚರಿಸಿದ್ದರೂ ನೀರಿಗಿಳಿದಿದ್ದರು. ನೀರುಪಾಲಾಗುತ್ತಿದ್ದ ವಿರೂರುಲ್ಕರ್ ನನ್ನು ರಕ್ಷಿಸಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ.